Visitors have accessed this post 650 times.
ಚೆನ್ನೈ: ರಥೋತ್ಸವ ನೋಡಲು ಬಂದ ಬಾಲಕಿಯನ್ನು ಅಪಹರಣಗೈದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಪ್ರಕರಣ ತಮಿಳುನಾಡಿನಲ್ಲಿ. ನಡೆದಿರುವುದು ಬೆಳಕಿಗೆ ಬಂದಿದೆ.
ಮಾ.9 ರಂದು ಈ ಘಟನೆ ನಡೆದಿದ್ದು, ಈ ಪ್ರಕರಣ ಸಂಬಂಧ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಮಾ. 9 ರಂದು 17 ವರ್ಷದ ಬಾಲಕಿ ವೀರಕುಮಾರಸ್ವಾಮಿ ದೇವಸ್ಥಾನದ ರಥೋತ್ಸವ ನೋಡಲು ವೆಲ್ಲಕೋವಿಲ್‌ಗೆ ಗ್ರಾಮಕ್ಕೆ ಭೇಟಿ ನೀಡಿದ್ದಳು. ಈ ವೇಳೆ ಏಳು ಮಂದಿ ಬಾಲಕಿಯನ್ನು ಅಪಹರಿಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಈ ಸಂಬಂಧ ಪೊಲೀಸರಿಗೆ ಬಾಲಕಿಯ ಮನೆಯವರು ದೂರನ್ನು ನೀಡಿದ್ದಾರೆ. ಪೊಲೀಸರು ಘಟನಾ ಸಂಬಂಧ ಆರೋಪಿಗಳನ್ನು ಬಂಧಿಸಲು ಎರಡು ವಿಶೇಷ ತಂಡವನ್ನು ರಚಿಸಿ, ಕಾಮರಾಜಪುರಂನ 32 ವರ್ಷದ ಆರೋಪಿ ಮತ್ತು 29 ವರ್ಷದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ತೀವ್ರ ವಿಚಾರಣೆ ಬಳಿಕ ಉಳಿದವರನ್ನು ಬಂಧಿಸಲಾಗಿದೆ. ಕೃತ್ಯವೆಸಗಿಗ 7 ಮಂದಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.