ಲೋಕಸಭಾ ಚುನಾವಣೆ; 85 ವರ್ಷ’ಕ್ಕಿಂತ ಮೇಲ್ಪಟ್ಟವರಿಗೆ ‘ಮನೆಯಿಂದಲೇ ಮತದಾನ’ಕ್ಕೆ ಅವಕಾಶ

ಬೆಂಗಳೂರು: ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ನಂತ್ರ, ಚುನಾವಣಾ ಕಾವು ಬಿಸಿಲಲ್ಲೂ ಏರಿದೆ. ಈ ವೇಳೆಯಲ್ಲಿ 85 ವರ್ಷ ಮೇಲ್ಪಟ್ಟಂತವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶವನ್ನು ನೀಡಲಾಗಿದೆ.

ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು ದೇಶದಲ್ಲಿ 85 ವರ್ಷ ಮೀರಿದ ವಯೋಮಾನದ 81 ಲಕ್ಷಕ್ಕೂ ಅಧಿಕ ಮತದಾರರಿದ್ದು, ಅವರಿಗಾಗಿ ಮನೆಯಿಂದಲೇ ಮತದಾನ ಸೌಲಭ್ಯವನ್ನು ಆಯೋಗ ಕಲ್ಪಿಸಿದೆ ಎಂದಿದೆ.

ಇದರ ಜೊತೆಗೆ ಶೇ.40ಕ್ಕಿಂತಲೂ ಅಧಿಕ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೂ ಈ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ನಗರ ಪ್ರದೇಶದಲ್ಲಿ 21,595, ಗ್ರಾಮೀಣ ಪ್ರದೇಶದಲ್ಲಿ 37,239 ಸೇರಿದಂತೆ ಒಟ್ಟು 58,834 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹೆಚ್ಚು ಮತಗಟ್ಟೆಗಳಿರುವ ಕ್ಷೇತ್ರ ಬೆಂಗಳೂರು ಉತ್ತರವಾಗಿದೆ. ಇಲ್ಲಿ 2911 ಮತಗಟ್ಟೆಗಳಿದ್ದಾವೆ. ಕಡಿಮೆ ಇರುವ ಮತಗಟ್ಟೆ ಕ್ಷೇತ್ರ ಉಡುಪಿಯಾಗಿದೆ. ಇಲ್ಲಿ 1842 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

Leave a Reply