
ಪುತ್ತೂರು : ಸುಮಾರು 15 ದಿನಗಳ ಹಿಂದೆ 2 ಚೀಲ ಕರಿಮೆಣಸನ್ನು ತೋಟದ ಬಿಡಾರದಲ್ಲಿ ಶೇಖರಿಸಿಟ್ಟಿದ್ದು, 2 ಚೀಲದ ಪೈಕಿ 1 ಚೀಲ ಕಳುವಾಗಿರುವ ಘಟನೆ ಪಾಣಾಜೆ ಗ್ರಾಮದ ಕಂಚಿಲ್ ಕುಂಜ ಎಂಬಲ್ಲಿ ನಡೆದಿದೆ.



ಆಲಿ ಎಂಬವರು ಪಾಣಾಜೆ ಗ್ರಾಮದಲ್ಲಿರುವ ಕಂಚಿಲ್ ಕುಂಜ ಎಂಬಲ್ಲಿರುವ, ಪಾಲಿನ ಜಾಗದ ತೋಟದ ಬಿಡಾರದಲ್ಲಿ ಸುಮಾರು 15 ದಿನಗಳ ಹಿಂದೆ 2 ಚೀಲ ಕರಿಮೆಣಸು ಶೇಖರಿಸಿಟ್ಟಿದ್ದು, ದಿನಾಂಕ 14.03.2024 ರಂದು ಆಲಿಯವರು ಶೇಖರಿಸಿಟ್ಟಲ್ಲಿ ಹೋಗಿ ನೋಡಿದಾಗ 2 ಚೀಲದ ಪೈಕಿ 1 ಚೀಲ ಕಳುವಾಗಿರುವುದು ಕಂಡು ಬಂದಿರುತ್ತದೆ. ಕಾಣೆಯಾದ 1 ಚೀಲದ ಕರಿಮೆಣಸು ಸುಮಾರು 30-32 ಕೆ.ಜಿ ಯಷ್ಟಿದ್ದು ಅಂದಾಜು ಮೌಲ್ಯ 17,000-18,000 ರೂ ಆಗಬಹುದಾಗಿದೆ. ಘಟನೆ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 42-2024 ಕಲಂ 454,457,380 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.