Visitors have accessed this post 812 times.

ಮಂಗಳೂರು: ದೈವದ ಕಾರ್ಯಕ್ಕೆ ಮುಸ್ಲೀಮರಿಗೆ ಆಹ್ವಾನ…! ಸಾಮರಸ್ಯಕ್ಕೆ ಸಾಕ್ಷಿಯಾದ ತೆಂಕ ಎಡಪದವು ಗ್ರಾಮ

Visitors have accessed this post 812 times.

ಮಂಗಳೂರು : ಕರಾವಳಿಯಲ್ಲಿ ಅದೆಷ್ಟೇ ಹಿಂದೂ ಮುಸ್ಲಿಂ ಅನ್ನೋ ಸಂಘರ್ಷಗಳು ನಡೆದರೂ ಬಹುತೇಕ ಕಡೆಗಳಲ್ಲಿ ಎರಡೂ ಧರ್ಮದವರು ಸಾಮರಸ್ಯದಿಂದಲೇ ಇದ್ದಾರೆ. ಇಂತಹ ಒಂದು ಸಾಮರಸ್ಯಕ್ಕೆ ಸಾಕ್ಷಿಯಾಗಿ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮ ಸುದ್ದಿಯಾಗಿದೆ. ಇಲ್ಲಿ ಮಾರ್ಚ್ 24 ರಿಂದ 27 ರ ವರೆಗೆ ನಡೆಯುವ ದೈವಗಳ ಕಾರ್ಯಕ್ರಮಕ್ಕೆ ಪದರಂಗಿ ಮಸೀದಿಯವರಿಗೆ ಆಹ್ವಾನ ನೀಡಿದ್ದಾರೆ.ತೆಂಕ ಎಡಪದವಿನ  ಕೊಂದೋಡಿ ಗಡುಸ್ಥಳ ವ್ಯಾಘ್ರ ಚಾಮುಂಡಿ ಮೈಸಂದಾಯ ದೈವಗಳ ಗರ್ಭಕುಂಡ ಹಾಗೂ ಮಹಮ್ಮಾಯಿ ಅಮ್ಮನವರ ಶಿಲಾಮಯ ಕಟ್ಟಯ ಪುನರ್‌ ಪ್ರತಿಷ್ಠೆ ಹಾಗೂ ನೇಮೋತ್ಸವಕ್ಕೆ ಈ ಆಹ್ವಾನ ನೀಡಲಾಗಿದೆ. ರಂಝಾನ್‌ ಪ್ರಯುಕ್ತ ನಮಾಜ್‌ ನಡೆಸುತ್ತಿದ್ದ ಮುಸ್ಲಿಂ ಬಾಂದವರ ನಮಾಜ್ ಮುಗಿಯುವರೆಗೂ ಕಾದೂ ಆಹ್ವನಾ ಪತ್ರ ನೀಡಿ ಸಾಮರಸ್ಯ ಮೆರೆಯಲಾಗಿದೆ. ಇವತ್ತಿನ ದಿನಗಳಲ್ಲಿ ಹಿಂದೂ-ಮುಸ್ಲಿಮರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕೋಮು ಸೌಹಾರ್ದತೆ ಹದಗೆಡುತ್ತಿರುವ ದಿನಗಳಲ್ಲಿ ಇವರ ಸಾಮರಸ್ಯದ ನಡೆ ಇತರರಿಗೆ ಮಾದರಿಯಾಗಿದೆ. ಸಮಿತಿಯ ಪದಾಧಿಕಾರಿಗಳಾದ ಸುದರ್ಶನ್ ಪ್ರಭು.ಕೆ, ಇವರ ಮುಂದಾಳತ್ವದಲ್ಲಿ ಪದರಂಗಿಯ ಮುಸ್ಲಿಂ ಬಾಂದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಗ್ರಾಮದ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *