Visitors have accessed this post 187 times.

ಚುನಾವಣಾ ನೀತಿ ಸಂಹಿತೆ : ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಲು ಸೂಚನೆ

Visitors have accessed this post 187 times.

ಲೋಕಸಭೆ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಆಯುಧ ಕಾಯ್ದೆ 1959 ಕಲಂ (4), ಕಲಂ (21) ಮತ್ತು ಕಲಂ 24-ಎ(1) ರಡಿ ಆಯುಧ ಲೈಸೆನ್ಸ್ ಹೊಂದಿದ ಎಲ್ಲಾ ಲೈಸನ್ಸ್‍ದಾರರು (ರಾಷ್ಟ್ರೀಕೃತ ಬ್ಯಾಂಕ್‍ಗಳು, ರಿಸರ್ವ್ ಬ್ಯಾಂಕ್ ಅವರಿಂದ ಅನುಮೋದಿಸಿದ ಶೆಡ್ಯೂಲ್ ಬ್ಯಾಂಕ್‍ಗಳ ಸೆಕ್ಯೂರಿಟಿ ಗಾರ್ಡ್‍ಗಳ ಆಯುಧಗಳನ್ನು ಹೊರತುಪಡಿಸಿ) ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚುನಾವಣೆ ಮುಕ್ತಾಯಗೊಳ್ಳುವವರೆಗೆ ಪರವಾನಿಗೆದಾರರು ತಮ್ಮ ಶಸ್ತ್ರಾಸ್ತ್ರಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜೂ.13 ರವರೆಗೆ ಠೇವಣಿ ಮಾಡುವಂತೆ ಸಿ.ಆರ್.ಪಿ.ಸಿ ಕಾಯ್ದೆ 1973 ಕಲಂ 144 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.

 

ಯಾವುದೇ ಲೈಸೆನ್ಸ್‍ದಾರರು ಚುನಾವಣೆ ಸ್ಥಳ ಮತ್ತು ಸಾರ್ವಜನಿಕ ಸ್ಥಳದಲ್ಲಿ ಆಯುಧಗಳನ್ನು ಹೊತ್ತೊಯ್ಯುವುದು ಮತ್ತು ಪ್ರದರ್ಶನ ಮಾಡುವುದನ್ನು ನಿಷೇಧಿಸಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *