November 8, 2025
WhatsApp Image 2024-03-26 at 10.57.20 AM
ಉಳ್ಳಾಲ: ಸಮೀಪದ ಸೋಮೇಶ್ವರ ಸಮುದ್ರ ತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಮಹಿಳೆಯನ್ನು ಸ್ಥಳೀಯ ಜೀವರಕ್ಷಕರು ರಕ್ಷಿಸಿದರೂ, ಸೂಕ್ತ ಚಿಕಿತ್ಸೆಗೆ ವಾಹನ ಸಿಗದೆ, ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಸಮುದ್ರ ತೀರದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ಸುಮಾರು 45ರಿಂದ 50 ವರ್ಷ ವಯಸ್ಸಿನ ಮಹಿಳೆ ಸಮುದ್ರ ಪಾಲಾಗಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ಜೀವರಕ್ಷಕ ಅಶೋಕ್‌ ಸೋಮೇಶ್ವರ ಮಹಿಳೆಯನ್ನು ಸಮುದ್ರದಿಂದ ಮೇಲೆಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿದ್ದು, ಈ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದು, ವಾಹನ ತಡವಾದ ಕಾರಣ ಮಹಿಳೆ ಸಮುದ್ರ ಬದಿಯಲ್ಲೇ ಮೃತಪಟ್ಟಿದ್ದಾರೆ. ಸೋಮೇಶ್ವರ ಸಮುದ್ರ ತೀರಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿ ದರೂ ಇಲ್ಲಿ ಜೀವರಕ್ಷಕ ಸಾಧನ ಗಳಾಗಲಿ, ತುರ್ತು ಚಿಕಿತ್ಸೆಗೆ ಬೇಕಾದ ವ್ಯವಸ್ಥೆಗಳಿಲ್ಲ.
ಸ್ಥಳೀಯ ಮೀನುಗಾರರು ಜೀವರಕ್ಷಣೆಯನ್ನು ನಡೆಸುತ್ತಿದ್ದು, ಅವರಿಗೆ ಯಾವುದೇ ಸೌಲಭ್ಯಗಳಿಲ್ಲ. ಸೋಮೇಶ್ವರ ಸಮುದ್ರ ತೀರದಲ್ಲಿ ಶೌಚಾಲಯ ವ್ಯವಸ್ಥೆ ಇದ್ದರೂ ಅದನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೃತದೇಹವನ್ನು ವೆನ್‌ಲಾಕ್‌ ಶವಾಗಾರದಲ್ಲಿ ಇಟ್ಟಿದ್ದು ಮೃತದೇಹದ ಗುರುತು ಪತ್ತೆಯಾಗಬೇಕಷ್ಟೇ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply