August 30, 2025
01

ಬಂಟ್ವಾಳ: ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಗೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಪೂರ್ತಿ ಚುನಾವಣಾ ಪ್ರಕ್ರಿಯೆಗೆ ವೀಕ್ಷಕರಾಗಿ ಪಿಯೂಸ್.ಎಸ್‌.ರೋಡ್ರಿಗ್ರಸ್,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವೀಕ್ಷಕರಾಗಿ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವೀಕ್ಷಕರಾಗಿ ಸುದರ್ಶನ್ ಜೈನ್ ಆಯ್ಕೆಯಾಗಿರುತ್ತಾರೆ.

ತಕ್ಷಣದಿಂದಲೇ ತಮ್ಮ ತಮ್ಮ ಕ್ಷೇತ್ರದಲ್ಲಿ ಉಸ್ತುವಾರಿ ವಹಿಸಿಕೊಂಡು ಕಾರ್ಯಪ್ರವರ್ತರಾಗುವಂತೆ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಹಾಗೂ ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅದ್ಯಕ್ಷರಾದ ಶ್ರೀ. ಬಿ.ರಮನಾಥ ರೈಯವರು ಆದೇಶಿಸಿರುತ್ತಾರೆ. ಈ ಮುಖಂಡರುಗಳು ಈ ಹಿಂದೆ ನಡೆದ ಹಲವಾರು ಸಾರ್ವತ್ರಿಕ ಚುನಾವಣೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಪಕ್ಷ ಸಂಘಟನೆಗೆ ಮತ್ತು ಮತ ಕ್ರೂಡಿಕರಣವಾಗಲ್ಲಿ ಬಹು ಮುಖ್ಯ ಪಾತ್ರವಹಿಸಿರುವುದು ಗಮನಾರ್ಹವಾಗಿದೆ.

About The Author

Leave a Reply