ಮಂಗಳೂರು: ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೇ 5ರಂದು ಆಗಮಿಸಿದ ಪ್ರಯಾಣಿಕನಿಂದ ಕಳ್ಳಸಾಗಾಟ 40,40, 220ರೂ ಮೌಲ್ಯದ 24 ಕ್ಯಾರಟ್‌ನ 578 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಜಿಲ್ಲೆ ಮೊಗ್ರಾಲ್ ಪುತ್ತೂರು ನಿವಾಸಿಯಾಗಿರುವ ವ್ಯಕ್ತಿಯನ್ನು ಅನುಮಾನದ ಮೇಲೆ ತಪಾಸಣೆಗೆ ಒಳಪಡಿಸಿದಾಗ ದೇಹದಲ್ಲಿ 3 ಅಂಡಾಕಾರದ ವಸ್ತು ಪತ್ತೆಯಾಗಿದ್ದು, ಅವುಗಳಲ್ಲಿ ಚಿನ್ನವನ್ನು ಅಡಗಿಸಿಟ್ಟು ಸಾಗಿಸಲು ಯತ್ನಿಸಿರುವುದು ಕಂಡುಬಂದಿದೆ.