Visitors have accessed this post 538 times.
ಮಂಗಳೂರು: ನಗರದ ನವ ಮಂಗಳೂರು ಬಂದರಿಗೆ ಈ ಋತುವಿನ ಕೊನೆಯ ಪ್ರವಾಸಿ ಹಡಗು ಮಂಗಳವಾರ ಆಗಮಿಸಿದೆ. RIVIERA ಎಂಬ ಈ ಹಡಗು ಮಂಗಳವಾರ ಬೆಳಗ್ಗೆ ಬಂದರಿಗೆ ಆಗಮಿಸಿದೆ. ಮಾರ್ಷಲ್ ಐಲ್ಯಾಂಡ್ ಫ್ಲ್ಯಾಗ್ಡ್ ಎಂಬ ಈ ಹಡಗು 1141 ಪ್ರಯಾಣಿಕರನ್ನು ಮತ್ತು 752 ಸಿಬ್ಬಂದಿಯನ್ನು ಹೊತ್ತು ತಂದಿದೆ. ಎನ್ಎಂಪಿಎ ಬರ್ತ್ ನಂ. 04ರಲ್ಲಿ ಬಂದಿಳಿದ ಈ ಹಡಗು ಕೊರೊನಾ ಬಳಿಕ ಈ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರೊಂದಿಗೆ ಆಗಮಿಸಿದೆ. ಕೊಚ್ಚಿನ್ ಬಂದರಿನಿಂದ ಮಂಗಳೂರಿಗೆ ಆಗಮಿಸಿದೆ. ಹಡಗಿನಲ್ಲಿ ಬಂದಿದ್ದ ಪ್ರಯಾಣಿಕರಿಗೆ ಸಾಂಪ್ರಾದಾಯಿಕ ಸ್ವಾಗತ ಕೋರಲಾಯಿತು. ಪ್ರಯಾಣಿಕರನ್ನು ಮಂಗಳೂರಿನ ವಿವಿಧ ಪ್ರವಾಸಿ ತಾಣಗಳಿಗೆ ಕರೆದೊಯ್ದು ಮಂಗಳೂರಿನ ಸೊಬಗನ್ನು ತೋರಿಸಲಾಯಿತು. ಸಂಜೆ ವೇಳೆ ಈ ಹಡಗು ಮೊರ್ಮುಗೋವಾ ಬಂದರಿನತ್ತ ಪ್ರಯಾಣ ಬೆಳೆಸಿತು.