Visitors have accessed this post 496 times.
ಕಾರ್ಕಳ: ಸೈಜ್ ಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಭ್ರಾಮರಿ ಕ್ರಾಸ್ ಬಳಿ ಶನಿವಾರ ಸಂಜೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕೋರೆ ಕಾರ್ಮಿಕರಾದ ಕೊಪ್ಪಳ ಜಿಲ್ಲೆಯ ಯಲಬುರ್ಗಿ ದೇವಲಾಪುರ ನಿವಾಸಿಗಳಾದ ಕರಿಯಪ್ಪ(26) ಮತ್ತು ನರಿಯಪ್ಪ(27) ಮೃತಪಟ್ಟಿದ್ದಾರೆ. ಕಾರ್ಕಳ ಪುರಸಭೆಯ ಮಾಜಿ ಸದಸ್ಯರೊಬ್ಬರ ಮಾಲೀಕತ್ವದ ನಿಟ್ಟೆಯ ಭ್ರಾಮರಿ ಕ್ರಾಸ್ ಬಳಿಯ ಕಲ್ಲು ಕೋರೆಯಲ್ಲಿ ಶಿಲೆ ಕಲ್ಲು ಲೋಡ್ ಮಾಡಿಕೊಂಡು ಮಂಗಳೂರಿನ ಕಡೆ ತೆರಳುತ್ತಿದ್ದಾಗ ಕಡಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಈ ದುರ್ಘಟನೆ ಭೀಕರ ಸಂಭವಿಸಿದೆ. ಅಪಘಾತದ ಸಂದರ್ಭದಲ್ಲಿ ಕಾರ್ಮಿಕರು ಹಿಂಬದಿಯಲ್ಲಿ ಕುಳಿತಿದ್ದರು ಎನ್ನಲಾಗಿದೆ, ಲಾರಿ ಪಟ್ಟಿಯಾಗುತ್ತಿದ್ದಂತೆಯೇ ಕಲ್ಲುಗಳು ಕಾರ್ಮಿಕರಾದ ಕರಿಯಪ್ಪ ಮತ್ತು ನರಿಯಪ್ಪ ಎಂಬವರ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.Related Posts
ಮಂಗಳೂರು ಶೆಟ್ಟಿ ಲಂಚ್ ಹೋಮ್ ಪಾರ್ಟ್ನರ್ ಅರೆಸ್ಟ್.! ಇದೊಂದು ಸುಳ್ಳು ಸುದ್ದಿ
Visitors have accessed this post 585 times.
ಬೆಂಗಳೂರಿನ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿರುವ ಹೋಟೆಲ್ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪ್ರೇಮಿಗಳ ವಿಡಿಯೋ ಸೆರೆ ಹಿಡಿದು ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮಂಗಳೂರು ಶೆಟ್ಟಿ ಲಂಚ್ ಹೋಮ್…
ATM ಕಾರ್ಡ್ ಬಳಸಿ ಹಣ ಕಳವು ದಂಧೆ – ಅಂತರ್ ರಾಜ್ಯ ಆರೋಪಿಗಳ ಬಂಧನ
Visitors have accessed this post 216 times.
ಕುಂದಾಪುರ: ಎಟಿಎಂ ಕೇಂದ್ರದಿಂದ ಹಣ ತೆಗೆಯುಲು ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಕಣ್ಣು ತಪ್ಪಿಸಿ ಅವರ ಎಟಿಎಂ ಕಾರ್ಡ್ ಬಳಸಿ ಹಣ ಎಗರಿಸುತ್ತಿದ್ದ ಇಬ್ಬರು ಹರಿಯಾಣ ಮೂಲದ…
ಮಂಗಳೂರು: ರಸ್ತೆ ಗುಂಡಿಗಳಿದ್ದರೆ ಈ ನಂಬರ್ ಗೆ ದೂರು ನೀಡಿ
Visitors have accessed this post 462 times.
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗೆ ಡಾಮಾರು ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರವುದರಿಂದ ಗಂಭೀರವಾಗಿ ಪರಿಗಣಿಸಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳು…