April 18, 2026
WhatsApp Image 2026-04-18 at 5.37.03 PM

ಪುತ್ತೂರು: ಬೈಕೊಂದು ಡಿವೈಡರ್ ಹಾಗೂ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಪುತ್ತೂರಿನ ಪಡೀಲ್ ನಲ್ಲಿ ನಡೆದಿದೆ.

ಮೃತ ಯುವಕನನ್ನು ಬೆಳ್ಳಿಪ್ಪಾಡಿ ನಿವಾಸಿ ಧನರಾಜ್(21) ಎಂದು ಗುರುತಿಸಲಾಗಿದೆ.

ಧನರಾಜ್ ಅವರು ಸ್ನೇಹಿತರ ಜೊತೆ ಸೇರಿ ಪುತ್ತೂರು ಜಾತ್ರೆಯ ಗದ್ದೆಯಲ್ಲಿ ಆಹಾರ ಸ್ಟಾಲ್ ಹಾಕಿದ್ದರು. ನಿನ್ನೆ ಮುರ ಬಳಿಯ ಸ್ನೇಹಿತನ ಮನೆಯಲ್ಲೇ ತಂಗಿದ್ದ ‌ಇವರು ಇಂದು ಬಟ್ಟೆ ಬದಲಾಯಿಸಿ ಸ್ಟಾಲ್ ಗೆ ತೆರಳಲು ಮನೆಗೆ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದರು.

ಈ ವೇಳೆ ಅವರ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್ ಹಾಗೂ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಇನ್ನೊಂದು ಬೈಕ್ ಗೂ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ತಲೆಯ ಭಾಗಕ್ಕೆ ಗಂಭೀರ ಗಾಯವಾದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

ಸದ್ಯ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

About The Author

Leave a Reply