April 25, 2026
WhatsApp Image 2026-04-19 at 9.07.14 AM

ಶಿವಮೊಗ್ಗ: ಹುಟ್ಟುಹಬ್ಬದ ಔತಣಕೂಟವೊಂದರಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಗಂಟಲಲ್ಲಿ ಆಹಾರ ಸಿಲುಕಿ ಕೊಂಡ ಪರಿಣಾಮವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕುಂಸಿ ಸಮೀಪದ ಚನ್ನಹಳ್ಳಿಯಲ್ಲಿ ವರದಿಯಾಗಿದೆ.ಸಚಿನ್ (21) ಮೃತ ಯುವಕ ಎಂದು ಗುರುತಿಸಲಾಗಿದೆ.

ಗ್ರಾಮಸ್ಥರೊಬ್ಬರು ಜನ್ಮ ದಿನದ ಹಿನ್ನೆಲೆ ಗ್ರಾಮದ ಹೊರಗಡೆ ಕಟ್ಟಿಸುತ್ತಿದ್ದ ಮನೆಯ ಬಳಿ ಔತಣಕೂಟ ಏರ್ಪಡಿಸಿದ್ದರು. ಇದೇ ವೇಳೆ ಸಚಿನ್ ಊಟ ಹಾಕಿಸಿಕೊಂಡು ಕಾಮಗಾರಿ ನಡೆಯುತ್ತಿದ್ದ ಮನೆಯೊಳಗೆ ಹೋಗಿದ್ದಾರೆ. ಊರಿನವರೆಲ್ಲರೂ ಊಟ ಮುಗಿಸಿಕೊಂಡು ಮನೆಗೆ ಹೋಗಿದ್ದಾರೆ.ಶುಕ್ರವಾರ ಬೆಳಗ್ಗೆ ಮನೆ ಕಾಮಗಾರಿ ಮಾಡಲು ಹೋದ ಕೆಲಸಗಾರರು ನೋಡಿದಾಗ ಸಚಿನ್ ಮೃತಪಟ್ಟಿರುವುದು ಕಂಡುಬಂದಿದೆ.

ವಿಷಯ ತಿಳಿದ ಸಚಿನ್ ಕುಟುಂಬಸ್ಥರು ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.ಗ್ರಾಮಸ್ಥರು ಕುಂಸಿ ಠಾಣೆಗೆ ವಿಷಯ ತಿಳಿಸಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಸಚಿನ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಸಚಿನ್ ಮದ್ಯ ಸೇವಿಸಿದ್ದು, ಚಿಕನ್ ಮೂಳೆ ಗಂಟಲಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply