ಮಂಗಳೂರು: ರಸ್ತೆಯಲ್ಲಿ ನಮಾಜ್ ವಿಚಾರ, ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುವುದು ನಿಲ್ಲಿಸಿ’ – SDPI

ಮಂಗಳೂರಿನಲ್ಲಿ ಯಾರೋ ನಾಲ್ಕು ಜನ ರಸ್ತೆಯಲ್ಲಿ ನಮಾಜ್ ಮಾಡಿದ್ದನ್ನೇ ಹಿಡಿದುಕೊಂಡು ರಾದ್ಧಾಂತ ಮಾಡುವ ಅವಶ್ಯಕತೆ ಇಲ್ಲ, ಅಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳತ್ತ ಗಮನ ಹರಿಸಿ ಎಂದು ಎಸ್‌ಡಿಪಿಐ ವಕ್ತಾರ ರಿಯಾಝ್ ಕಡಂಬು ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಮಾಜ್ ವಿಷಯವನ್ನೇ ದೊಡ್ಡದು ಮಾಡಿ, ಬೆಂಕಿ ಹಚ್ಚುವ ಕೆಲಸವನ್ನು ನಿಲ್ಲಿಸಬೇಕು. ಅಲ್ಲಿ ಸ್ಥಳಾವಕಾಶದ ಕೊರತೆ ಇದ್ದ ಕಾರಣ ಎರಡು ನಿಮಿಷ ನಮಾಜ್ ಮಾಡಿದ್ದಾರೆ. ಶರಣ್ ಪಂಪ್ ವೆಲ್ ಅವರ ಊರು, ಪಂಪ್ ವೆಲ್ ಮೇಲ್ಸೇತುವೆ ಕೆಳಗೆ ಸಾಕಷ್ಟು ಜನ ನಿರಾಶ್ರಿತರು ಮನೆಯಿಲ್ಲದೆ ಅಲ್ಲಿ ಮಲಗುತ್ತಾರೆ. ಅವರಿಗೆ ಆಶ್ರಯ ನೀಡುವ ಕೆಲಸ ಮಾಡಿ, ಹಾಗೆಯೇ ಎಲ್ಲ ಧರ್ಮಗಳ ಆಚರಣೆಯನ್ನು ಗೌರವಿಸಿ ಎಂದು ಅವರು ಹೇಳಿದ್ದಾರೆ.

Leave a Reply