ಉಡುಪಿ ತುಳುನಾಡ ರಕ್ಷಣಾ ವೇದಿಕೆಗೆ ಹಲವಾರು ಯುವಕರು ಸೇರ್ಪಡೆ

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ರವಿವಾರ ದಿನಾಂಕ 02-06-2024 ರಂದು ಸಂಜೆ 4 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಾರ್ಯಕರ್ತ ಸಭೆ ಮತ್ತು ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ ನಡೆಯಿತು ಹಲವಾರು ಪ್ರಮುಖರು ವ್ಯಕ್ತಿಗಳು ತುಳುನಾಡ ರಕ್ಷಣಾ ವೇದಿಕೆ ಸಿದ್ಧಾಂತವನ್ನು ಒಪ್ಪಿ ಸೇರ್ಪಡೆಗೊಂಡರು ಜಿಲ್ಲಾಧ್ಯಕ್ಷ ಕೃಷ್ಣಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು.

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಅರುಣ್ ಪೂಜಾರಿ, ಸಂಜೀವ, ವರುಣ್ ಎಮ್ ಪೂಜಾರಿ, ದೀಪಕ್ ಶೆಟ್ಟಿ, ಕಿರಣ್ ಕುಮಾರ್, ಸಂದೀಪ್ ಕುಮಾರ್, ಪವನ್ ಪೂಜಾರಿ, ನಾಗರಾಜ್ , ವರುಣ ಪೂಜಾರಿ, ಶ್ರವಣ್ ಪೂಜಾರಿ, ದಿಲೀಪ್, ಭುವನ್ ಪೂಜಾರಿ, ದೀಕ್ಷಿತ್, ಬೀರಪ್ಪ ಮತ್ತಿತರರಿಗೆ ಸಂಘಟನೆಯ ಶಾಲು ಗೌರವಿಸಿದ್ದರು. ಬಳಿಕ ಮಾತನಾಡುತ್ತಾ ತುಳುನಾಡ ರಕ್ಷಣಾ ವೇದಿಕೆ ಸಂಘಟನೆಯು ಜಾತಿ ಧರ್ಮ ಭಾಷೆ ಪಕ್ಷ ಭೇದ ನೋಡದೆ ಪ್ರತಿಯೊಬ್ಬರ ಏಳಿಗೆಗೆ ಕಷ್ಟಕ್ಕೆ ಸಹಾಯ ಸಹಕಾರ ನೀಡುತ್ತಾ ನ್ಯಾಯಯುತ ಹೋರಾಟ ಮಾಡುತ್ತಾ ಬಂದಿದೆ ಸೇರ್ಪಡೆಗೊಂಡ ಸದಸ್ಯರು ಕೂಡ ಆದಷ್ಟು ತನ್ನಿಂದ ಇನ್ನೊಬ್ಬರಿಗೆ ಸಹಾಯ ಸಹಕಾರ ನೀಡಬೇಕು. ಹಾಗೂ ಹೊರ ರಾಜ್ಯಗಳಿಂದ ಬಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆರ್.ಬಿ.ಐ ಅನುಮತಿ ಇಲ್ಲದೆ ವಿವಿಧ ಹೆಸರುಗಳ ಹಣ ವಸೂಲಿ ಕಂಪನಿ ಪ್ರಾರಂಭಿಸಿ ವಿವಿಧ ಆಮಿಷ ಒಡ್ಡಿ ಜನರನ್ನು ಆರ್ಥಿಕ ಸಂಕಷ್ಟ ತಳ್ಳುವ ಬಡವರಿಗೆ ಮೋಸ ಮಾಡುವ ಕಂಪನಿಗಳ ವಿರುದ್ಧ ಹೋರಾಟಕ್ಕೆ ಸದಾ ಬದ್ಧರಾಗಿ ಬೇಕೆಂದು ಕರೆ ನೀಡಿದರು.

ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜ ಕೊಳಲಗಿರಿ ,ಮಹಿಳಾ ಘಟಕ ಜಿಲ್ಲಾಧ್ಯಕ್ಷ ಶೋಭಾ ಪಾಂಗಳ, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ,
ಯುವ ಘಟಕ ಅಧ್ಯಕ್ಷ ವೇಣು ಪೂಜಾರಿ , ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಜಿಲ್ಲಾ ಸಲಹೆಗಾರ ಸುಧಾಕರ್ ಅಮೀನ್, ಜಿಲ್ಲಾ ಉಪಾಧ್ಯಕ್ಷ ಜಯ ರಾಮ ಪೂಜಾರಿ ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಲ ಅಮಿನ್, ಯುವ ಘಟಕ ಉಪಾಧ್ಯಕ್ಷ ರೋಷನ್ ಬಂಗೇರ , ಆಟೋ ಘಟಕ ಜಿಲ್ಲಾಧ್ಯಕ್ಷ ಅನಿಲ್ ಪೂಜಾರಿ, ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್, ಸಂಘಟನೆ ಪ್ರಮುಖರಾದ ಸಂಗೀತ ಹಿರಿಯಡ್ಕ , ಜ್ಯೋತಿ.ಆರ್ ಬನ್ನಂಜೆ, ಕೆ ಜಿ ಬಾಲು, ಲಕ್ಷ್ಮೀಬಾಯಿ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

 

Leave a Reply