ಮಂಗಳೂರು:ಇತ್ತೀಚೆಗೆ ಸಾಂದರ್ಭಿಕ ರಸ್ತೆ ನಮಾಝ್ ನ ಘಟನೆಗೆ ಸಂಬಂಧಿಸಿದಂತೆ ಮುಸ್ಲಿಮರು – ಸರಕಾರದ ಮಧ್ಯೆ ಏರ್ಪಟ್ಟ ಪ್ರಕರಣದ ಹಿನ್ಪಡೆಯುವಿಕೆ ಯೊಂದಿಗೆ ವಿವಾದ ಸುಖಾಂತ್ಯ ಗೊಂಡರೂ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಘಟನೆಯನ್ನು ಧರ್ಮೋ – ರಾಜಕೀಯ ಗೊಳಿಸಲು ಪ್ರಯತ್ನಿಸುತ್ತಿರುವುದು ವಿಷಾದನೀಯ. ಅವರು ಇದಕ್ಕೆ ಸಂಬಂಧಿಸಿದಂತೆ , ನಡುರಸ್ತೆಯಲ್ಲಿ ನಮಾಜ್ ಮಾಡಿದವರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಹಿಂದಕ್ಕೆ ಪಡೆಯಲಾಗಿದೆ. ಸರ್ಕಾರದ ತುಷ್ಠೀಕರಣ ನೀತಿಯಿಂದ ಕೇಸ್ ಹಿಂಪಡೆಯಲಾಗಿದೆ. ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿ ಪಾಲಿಸುತ್ತಿದೆ ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಾಝ್ ಘಟನೆಯಲ್ಲಿ ಒಂದು ನಿರ್ಧಿಷ್ಟ ಧರ್ಮದ ಪ್ರಮುಖ ಆರಾಧನೆಯ ನಿರ್ವಹಣೆಯ ಸ್ಥಳ ಸಾಂದರ್ಭಿಕವಾಗಿ ಪಲ್ಲಟವಾದ ಬಗ್ಗೆ ಮಾತ್ರಾ ವಿವಾದವೇ ಹೊರತು ಇದು ಒಂದು ಸಮುದಾಯದ ಭಾದ್ಯತೆ ಏನೂ ಅಲ್ಲ. ನಳಿನ್ ಪ್ರಕಾರ ಅನ್ಯ ಧರ್ಮಕ್ಕೆ ಇದರಿಂದ ಅನ್ಯಾಯವಾಗಿದೆ ಎಂದಿದ್ದಾರೆ. ನಮಾಝ್ ನ ಸಾಂದರ್ಭಿಕ ಸ್ಥಾನ ಪಲ್ಲಟದಿಂದ ಅನ್ಯ ಧರ್ಮಕ್ಕೆ ಏನು ಅನ್ಯಾಯ ಆಗಿದೆ ಎಂದು ತಿಳಿಸಲಿ. ನಾವು ಪರಿಹಾರ ಕಂಡು ಕೊಳ್ಳುತ್ತೇವೆ.
ಆದರೆ, ನಳಿನ್ ಕುಮಾರ್ ಕಟೀಲ್ ರವರ ಪಕ್ಷ ಸೋಲಿನ ತುದಿಯಲ್ಲಿರುವ ಈ ಸಂಧರ್ಭದಲ್ಲಿ ಮಾಜಿ ಸಂಸದರು ತಮ್ಮ ಹಿಂದಿನ ಕೋಮು ಚಾಳಿಯನ್ನು ಮುಂದುವರಿಸಿದಂತೆ ಹೇಳಿಕೆ ನೀಡಿದ್ದಾರೆ. ನಳಿನ್ ರವರನ್ನು ಜಿಲ್ಲೆ,ರಾಜ್ಯ ಮತ್ತು ಪಕ್ಷದಿಂದ ಬಿಜೆಪಿ ದೂರ ಇಟ್ಟ ಈ ಸಂಧರ್ಭದಲ್ಲಿ ಮಾಜಿ ಸಂಸದರು ಕೊಣಾಜೆ ವ್ಯಾಪ್ತಿಯ ಈ ಹಿಂದಿನ ಕೊಲೆ ಪ್ರಕರಣದಲ್ಲಿ ಪೊಲೀಸರ ಕರ್ತವ್ಯ ಮತ್ತು ತನಿಖೆಗೆ ಅಡ್ಡಿ ಪಡಿಸುವ ರೀತಿಯಲ್ಲಿ ಅಂದು ಸಾರ್ವಜನಿಕವಾಗಿ ಜಿಲ್ಲೆಗೆ ಬೆಂಕಿ ಹಾಕುತ್ತೇವೆ ಎಂದು ಬೊಗಳಿದ್ದರು. ಆ ಪ್ರಕರಣದಲ್ಲಿ ಪೊಲೀಸರ ತನಿಖೆಯಿಂದ ದುಷ್ಕರ್ಮಿ ಆರೋಪಿ ಯಾರೆಂದು ಪತ್ತೆಯಾದಾಗ ನಳಿನ್ ಇಂಗು ತಿಂದಿದ್ದರು, ತನ್ನ ಬಾಯಿಗೆ ಸ್ವಯಂ ಬೀಗ ಹಾಕಲಾಗಿತ್ತು. ನಳಿನ್ ಈಗ ಜಿಲ್ಲೆಗೆ ಬೆಂಕಿ ಹಾಕಲು ತಾನು ಬೆಂಕಿ ಪೊಟ್ಟಣ ಇಟ್ಟು ಕೊಂಡನ್ತಿದೆ. ನಳಿನ್ ಕುಮಾರ್ ಕಟೀಲು ರವರಿಗೆ ಏನು ನೈತಿಕತೆ ಇದೆ ಸರಕಾರ ಮತ್ತು ಸುಮೋಟು ಪ್ರಕರಣ ಹಿಂಪಡೆತ ಬಗ್ಗೆ ಮಾತನಾಡಲು. ಇನ್ನಾದರೂ ಮತೇತರ ಮೌಲ್ಯಗಳನ್ನು ಗೌರವಿಸಲು.
ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.