Visitors have accessed this post 774 times.
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಅಧಿಕಾರಿಗಳಿಗೆ ರಾಜಕಾರಣಿಗಳಿಂದ ಹಾಗೂ ಸ್ಯಾಂಡಲ್ ವುಡ್ ಹಿರಿಯರಿಂದ ದರ್ಶನನ್ನು ಬಂಧಿಸಬೇಡಿ ಎಂದು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು ರಾತ್ರಿಯಿಂದಲೇ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಜಾಸ್ತಿಯಾಗಿದೆಯಂತೆ, ಪೊಲೀಸ್ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ. ಅಲ್ಲದೆ ಸ್ಯಾಂಡಲ್ ವುಡ್ ನ ಹಿರಿಯರಿಂದಲೂ ಬಂಧಿಸಿದಂತೆ ಒತ್ತಡ ಕೇಳಿಬಂದಿದೆ. ದರ್ಶನ್ ರನ್ನು ಆರೋಪಿ ಬದಲು ಸಾಕ್ಷಿಯನ್ನಾಗಿ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಪೊಲೀಸ್ ಫೈಲ್ ನಲ್ಲಿ ದರ್ಶನ್ ಪ್ರಮುಖ ಪಾತ್ರ ಎಂದು ಉಲ್ಲೇಖಿಸಿಲ್ಲಾಗಿದ್ದು, ದರ್ಶನ್ ಬಂಧಿಸಿದಂತೆ ಇದೀಗ ರಾಜಕಾರಣಿಗಳಿಂದ ಒತ್ತಡ ಕೇಳಿಬಂದಿದೆ.