Visitors have accessed this post 436 times.

ಕಾಂಗ್ರೆಸ್ ಸರಕಾರ ಹಿಂದೂ ಕಾರ್ಯಕರ್ತರನ್ನು ಧಮನಿಸಲು ಪೊಲೀಸ್ ಇಲಾಖೆಯನ್ನು ಉಪಯೋಗಿಸುತ್ತಿದೆ- ಶರಣ್ ಪಂಪುವೆಲ್

Visitors have accessed this post 436 times.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಬಂದ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು, ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಜೈಲಿಗೆ ಹಾಕುವಂತದ್ದು ನಿರಂತರವಾಗಿ ನಡೆಯುತ್ತಿದೆ. ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡೆಸಿಕೊಂಡು ಹಿಂದೂ ಕಾರ್ಯಕರ್ತರನ್ನು ಧಮನಿಸುವಂತಹ ಷಡ್ಯಂತ್ರ ನಡೆಯುತ್ತಿದ್ದು, ಮಂಗಳೂರಿನ ಬೋಳಿಯಾರ್ ಸಮೀಪ ಭಾರತ ಮಾತೆಗೆ ಜೈಕಾರ ಹಾಕಿದಕ್ಕೆ ಮತಾಂದ ಜಿಹಾದಿಗಳು ಚೂರಿ ಹಾಕಿ ಕೊಲೆಗೆ ಪ್ರಯತ್ನಿಸಿದ್ದನ್ನು ಖಂಡಿಸುವ ಬದಲು ಚೂರಿ ಇರಿತಕ್ಕೆ ಒಳಗಾದವರ ಜೊತೆಗಿದ್ದ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿದೆ.

ಕೆಲವು ದಿನಗಳ ಹಿಂದೆ ರಸ್ತೆಯಲ್ಲಿ ನಮಾಜು ಮಾಡಿದವರ ಮೇಲೆ ಹಾಕಿದ ಕೇಸನ್ನು ವಾಪಸು ಪಡೆದು ಅದನ್ನು ಪ್ರಶ್ನೆ ಮಾಡಿದ ನನ್ನ ಮೇಲೆ ಕೇಸು ದಾಖಲಿಸದ್ದಾರೆ. 2 ತಿಂಗಳ ಹಿಂದೆ ಗೋರಕ್ಷಣೆ ಮಾಡುತ್ತಿರುವ ಬಜರಂಗದಳ ಕಾರ್ಯಕರ್ತ ಜಯಪ್ರಶಾಂತ್ ಮೇಲೆ ಗುಂಡಾ ಕಾಯಿದೆ ಜಾರಿ ಮಾಡಿ ಜೈಲಿಗೆ ಹಾಕಿದ್ದಾರೆ ಅಲ್ಲದೆ ಹಲವು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಮೊಕ್ಕದ್ದಮೆಗಳನ್ನು ನೀಡಿ ಗಡಿಪಾರು ಮಾಡಿದ್ದಾರೆ.

ಬೆಂಗಳೂರಿನಲ್ಲಿ ತನ್ನ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದಕ್ಕೆ ಹಿಂದೂವಿನ ಮೇಲೆ ಜಿಹಾದಿಗಳಿದ ಹಲ್ಲೆ, ಜೈಶ್ರೀರಾಮ್ ಹೇಳಿದಕ್ಕೆ ಹಿಂದೂಗಳ ಮೇಲೆ ಹಲ್ಲೆ, ವಿಧಾನ ಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದವರಿಗೆ ಜೈಲು ಶಿಕ್ಷೆ ಇಲ್ಲ, ಭಾರತ ಮಾತೆಗೆ ಜೈಕಾರ ಹಾಕಿದರೆ ಕೇಸು ಸರಕಾರದ ಈ ಹಿಂದೂ ವಿರೋಧಿ ಧೋರಣೆಯ ಕಾರಣದಿಂದಾಗಿ ಇವತ್ತು ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದು ಹಿಂದೂಗಳ ಮೇಲೆ ಮುಸ್ಲಿಂ ಜಿಹಾದಿಗಳಿಂದ ದಾಳಿಗಳು ನಡೆಯುತ್ತಾ ಇದೆ, ಪೊಲೀಸ್ ಇಲಾಖೆಯನ್ನು ಉಪಯೋಗಿಸಿ ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿ ಅವರನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ.

ರಾಜ್ಯಸರಕಾರದ ಈ ದುರಾಡಳಿತದ ವಿರುದ್ಧ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ. ಪೊಲೀಸ್ ಇಲಾಖೆಯು ರಾಜ್ಯ ಸರಕಾರದ ಕೈಗೊಂಬೆಯಂತೆ ವರ್ತಿಸದೆ ಕರ್ತವ್ಯ ಪಾಲನೆ ಮಾಡಬೇಕಾಗಿ ಒತ್ತಾಯಿಸುತ್ತೇನೆ ಮತ್ತು ಮಂಗಳೂರಿನ ಬೋಳಿಯಾರ್ ನಲ್ಲಿ ಭಾರತ ಮಾತೆಗೆ ಜೈಕಾರ ಹಾಕಿದ ಹಿಂದೂ ಕಾರ್ಯಕರ್ತರ ಮೇಲಿನ ಸುಳ್ಳು ಕೇಸನ್ನು ವಾಪಸು ಪಡೆಯಲು ಆಗ್ರಹಿಸುತ್ತೇನೆ.

Leave a Reply

Your email address will not be published. Required fields are marked *