August 30, 2025
WhatsApp Image 2024-06-12 at 9.29.19 AM

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ನಟ ದರ್ಶನ್ ಮತ್ತು 12 ಮಂದಿಯನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಇಂದು ರೇಣುಕಾಸ್ವಾಮಿ ಶವ ಎಸೆದ ಸ್ಥಳದ ಮಹಜರು ನಡೆಯಲಿದೆ.

ಇಂದು ದರ್ಶನ್ ಮತತ್‌ಉ ಸಹಚರರ ವಿಚಾರಣೆ ನಡೆಸಲಿದ್ದು, ಕೃತ್ಯ ನಡೆದ ಸ್ಥಳಗಳಲ್ಲಿ ಮಹಜರು ನಡೆಸುವ ಸಾಧ್ಯತೆ ಇದೆ.

ಕೊಲೆಯಾದ ಸ್ಥಳ, ಮೃತದೇಹ ಎಸೆದ ಸ್ಥಳಗಳಲ್ಲಿ ಪೊಲೀಸರು ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಲಿದ್ದಾರೆ.

ಪೊಲೀಸ್‌ ಕಸ್ಡಡಿಯಲ್ಲಿ ರಾತ್ರಿ ಕಳೆದ ದರ್ಶನ್‌

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಂಬಂಧ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌ ಮತ್ತು ಸಹಚರರು ಪೊಲೀಸ್‌ ಕಸ್ಟಡಿಯಲ್ಲಿ ರಾತ್ರಿ ಕಳೆದಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶದ ಬೆನ್ನಲ್ಲೇ ವಶಕ್ಕೆ ಪಡೆದಿರುವ ಪೊಲೀಸರು ದರ್ಶನ್‌ ಮತ್ತು ಸಹಚರರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಕಸ್ಟಡಿಗೆ ಹಾಕಿದೆ.

ರಾತ್ರಿ ನಟ ದರ್ಶನ್‌ ಮತ್ತು ಸಹಚರರಿಗೆ ಬೆಡ್‌ ಶೀಟ್‌, ಕಾರ್ಪೇಟ್‌ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ತಲೆನೋವು, ಮೈ-ಕೈ ನೋವಿಗೆ ಡೋಲೋ -೬೫೦ ಮಾತ್ರೆ ತರಿಸಿದ್ದರು. ಬಂಧನದಿಂದಾಗಿ ನಟ ದರ್ಶನ್‌ ಚಿಂತಾಕ್ರಾಂತರಾಗಿದ್ದು, ರಾತ್ರಿ ನಿದ್ದೆ ಮಾಡದೇ ಎದ್ದು ಕುಳಿತಿದ್ದರು ಎನ್ನಲಾಗಿದೆ. ಅನ್ನಪೂರ್ಣೇ‍ಶ್ವರಿ ಪೊಲೀಸ್‌ ಠಾಣೆಯ ಮುಂದೆ ಕೆಎಸ್‌ ಆರ್‌ ಪಿ ತುಕಡಿ ನಿಯೋಜನೆ ಮಾಡಲಾಗಿದೆ.

About The Author

Leave a Reply