
ಮಂಗಳೂರು: ಕಾಟಿಪಳ್ಳದ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣದ ಎರಡನೇ ಪ್ರಮುಖ ಆರೋಪಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.



ಎರಡನೇ ಪ್ರಮುಖ ಆರೋಪಿಯಾಗಿರುವ ಸುವಿನ್ ಕಾಂಚನ್‌ಗೆ ಹೈಕೋರ್ಟ್ ಜಾಮೀನು ನೀಡಿದೆ.
2022 ಡಿಸೆಂಬರ್ 24ರಂದು ಅನೈತಿಕ ಸಂಬಂಧದ ಸಂಶಯದ ದ್ವೇಷದಿಂದ ಆರೋಪಿಗಳು ಅಬ್ದುಲ್ ಜಲೀಲ್‌ನ ಅಂಗಡಿಗೆ ತೆರಳಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಬಳಿಕ ಆರೋಪಿಗಳ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.