ಪುತ್ತೂರು: 16ನೇ ವರ್ಷದ SDPI ಯ ಸಂಸ್ಥಾಪನಾ ದಿನದ ಅಂಗವಾಗಿ ಜೂನ್ 21 2024 ರಂದು ದ್ವಜಾರೋಹಣ ಕಾರ್ಯಕ್ರಮವು SDPI ಪುತ್ತೂರು ವಿಧಾನಸಭಾ ಕ್ಷೇತ್ರದ ಸಂಟ್ಯಾರ್ ಬೂತ್ ಸಮಿತಿ ವತಿಯಿಂದ ಸಂಟ್ಯಾರಿನಲ್ಲಿ ನಡೆಯಿತು.ದ್ವಜಾರೋಹಣವನ್ನು SDPI ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಕೆ ಎ ರವರು ನೆರವೇರಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ಸಂಟ್ಯಾರ್ ಬೂತ್ ಸಮಿತಿ ಅಧ್ಯಕ್ಷರಾದ ಮಸೂದ್ ಸಂಟ್ಯಾರ್ ವಹಿಸಿದರು.
SDPI ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಕೆ ಎ ರವರು ಸಂದೇಶ ಭಾಷಣ ಮಾಡಿದರು.SDPI ಪುತ್ತೂರು ವಿಧಾನಸಭಾ ಕಾರ್ಯದರ್ಶಿ ರಿಯಾಝ್ ಬಳಕ್ಕ ಹಾಗೂ BJM ಸಂಟ್ಯಾರ್ ಇದರ ಸದಸ್ಯರಾದ C M ಅಬ್ದುಲ್ಲಾ ಮುಸ್ಲಿಯಾರ್ ಅತಿಥಿ ಭಾಷಣ ಮಾಡಿದರು.ವೇದಿಕೆಯಲ್ಲಿ BJM ಸಂಟ್ಯಾರ್ ಇದರ ಕಾರ್ಯದರ್ಶಿ ಹಮೀದ್ ಕಲ್ಲರ್ಪೆ , AYA ಸಂಟ್ಯಾರ್ ಇದರ ಅಧ್ಯಕ್ಷರಾದ ಫವಾಝ್ ಮರಿಕೆ , ಪಕ್ಷದ ಕಾರ್ಯಕರ್ತರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.ಝಕರಿಯಾ ಅವರು ಸ್ವಾಗತಿಸಿ ವಂದಿಸಿದರು.