SDPI ಗುರುಪುರ ಗ್ರಾಮ ಸಮಿತಿಯಿಂದ ಸಂಸ್ಥಾಪನಾ ದಿನಾಚರಣೆ

SDPI ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಹಾಗೂ ಸನ್ಮಾನ ಕಾರ್ಯಕ್ರಮವು SDPI ಅಡ್ಡೂರು ಕಛೇರಿ ಮುಂಭಾಗದಲ್ಲಿ ನಡೆಯಿತು.

ಗುರುಪುರ ಗ್ರಾಮ ಸಮಿತಿ ಅಧ್ಯಕ್ಷರಾದ ಎ.ಕೆ ಮುಸ್ತಾಕ್ ಧ್ವಜಾರೋಹಣವನ್ನು ನೆರವೇರಿಸಿದರು SDPI ರಾಜ್ಯ ಸಮಿತಿ ಸದಸ್ಯರಾದ ಅಕ್ಬರ್ ಅಲಿ ಸಂದೇಶ ಭಾಷಣವನ್ನು ನೇರೆವೆರಿಸಿದರು

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬ್ದುಲ್ ಕರೀಂ ಬ್ಯಾರಿ ಅಡ್ಡೂರು, ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫಾರ ನಾಸೀರ್ ಹಾಗೂ SSLC PUC ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಉಸ್ಮಾನ್ ಗುರುಪುರ ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ ಅಂಗಡಿ ಮನೆ ಕಾಂಜೀಲಕೋಡಿ ಜುಮಾ ಮಸೀದಿ ಅಧ್ಯಕ್ಷ ಝಕರಿಯ ಕೋಡಿಬೆಟ್ಟು,ದ.ಕ ಮದರಸಾ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಾಜಿ ಎಮ್ ಎಚ್ ಮುಹಿಯುದ್ದೀನ್, ಕಾಸಿಂ ಪ್ಯಾರ,ಹಮ್ಮಬ್ಬ ರೈಫಲ್,ಪುತ್ತುಮೋನು ನಡುಗುಡ್ಡೆ, ಗುರುಪುರ ಬ್ಲಾಕ್ ಅಧ್ಯಕ್ಷ ಅಶ್ರಫ್ ಕೈಕಂಬ, ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಏ.ಕೆ.ರಿಯಾಝ್, ಮೊಹಮ್ಮದ್ ಅಶ್ರಫ್, ಝಕರಿಯ ಶಾಹಿಕ್, ಮನ್ಸೂರ್, ದಿಲ್ಶಾದ್,ಬುಶ್ರಾ, ಮರಿಯಮ್ಮ ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದ್ದರು.

Leave a Reply