
ಬೆಳ್ತಂಗಡಿ: ಕನ್ಯಾಡಿ ಗ್ರಾಮದ ಗುರಿಪಳ್ಳದ ಕೊಡ್ಡೋಳು ಸಮೀಪ ಚಲಿಸುತ್ತಿದ್ದ ರಿಕ್ಷಾದ ಚಕ್ರಕ್ಕೆ ರಸ್ತೆ ಬದಿ ಕಟ್ಟಲಾಗಿದ್ದ ಜಾನುವಾರಿನ ಹಗ್ಗ ಸಿಲುಕಿ ರಿಕ್ಷಾ ಪಲ್ಟಿಯಾದ ಘಟನೆ ರವಿವಾರ ನಡೆದಿದೆ.



ಕೊಡೋಳು ಸಮೀಪ ಚಲಿಸುತ್ತಿದ್ದ ರಿಕ್ಷಾದ ಚಕ್ರಕ್ಕೆ ರಸ್ತೆ ಬದಿ ಕಟ್ಟಲಾಗಿದ್ದ ಜಾನುವಾರಿನ ಹಗ್ಗ ಸಿಲುಕಿದೆ. ಪರಿಣಾಮ ರಿಕ್ಷಾ ಪಲ್ಟಿಯಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಸ್ಥಳೀಯ ರಾಮಣ್ಣಗೌಡ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರಿಕ್ಷಾ ಚಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾದಲ್ಲಿ ಮಡಂತ್ಯಾರು ಕಡೆಯ ಮೂವರು ಪ್ರಯಾಣಿಸುತ್ತಿದ್ದರು. ಆ ಮೂವರಿಗೂ ಗಾಯಗಳಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ ಎನ್ನಲಾಗಿದೆ.