Visitors have accessed this post 258 times.
ಬೆಂಗಳೂರು : 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-184 ರಲ್ಲಿ ಘೋಷಿಸಿರುವಂತೆ “ಸ್ವಂತ ಕಟ್ಟಡವನ್ನು ಹೊಂದಿರುವ 25 ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪದವಿ ಪೂರ್ವ (PCMB) ಶಿಕ್ಷಣವನ್ನು ಪ್ರಾರಂಭಿಸಲು” ಸರ್ಕಾರದ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.
2024-25ನೇ ಸಾಲಿನಲ್ಲಿ ಆಯವ್ಯಯ ಭಾಷಣದ ಕಂಡಿಕೆ-184 ರಲ್ಲಿ ಘೋಷಿಸಿರುವಂತೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ 25 ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 2024-25ನೇ ಸಾಲಿನಿಂದ 60 ಸಂಖ್ಯಾಬಲದ ವಿಜ್ಞಾನ ವಿಭಾಗವನ್ನು (PCMB/PCMC) ಹಾಗೂ 2025-26ನೇ ಸಾಲಿನಿಂದ 60 ಸಂಖ್ಯಾಬಲದ ವಾಣಿಜ್ಯ ವಿಭಾಗದೊಂದಿಗೆ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡಿ, ಅಗತ್ಯ ಹುದ್ದೆಗಳನ್ನು ಸೃಜಿಸಿ ಹಾಗೂ ಸದರಿ ಹುದ್ದೆಗಳ ಭರ್ತಿಯಾಗುವವರೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ವಯ ಅತಿಥಿ ಉಪನ್ಯಾಸಕರುಗಳನ್ನು ಹಾಗೂ ಉಳಿದ ಇತರೆ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅನುಮತಿ ನೀಡಲು ಹಾಗೂ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ ಇವರು ಮೇಲೆ ಓದಲಾದ (2)ರಲ್ಲಿನ ಏಕಕಡತಗಳಲ್ಲಿ ಕೋರಿರುತ್ತಾರೆ.
ಮುಂದುವರೆದು, ದಿನಾಂಕ:10.06.2024ರಂದು ಮಾನ್ಯ ವಸತಿ, ವಕ್ಸ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿರುವಂತೆ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆ, ಜನಪತಿ ನಿಧಿಗಳ ಬೇಡಿಕೆ, ಜಿಲ್ಲಾ ಕಛೇರಿಗಳ ವರದಿ ಹಾಗೂ ಇತರ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಗಣನೆಗೆ ತೆಗೆದುಕೊಂಡು ಸ್ವಂತ ಕಟ್ಟಡ ಹೊಂದಿರುವ 25 ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಉನ್ನತೀಕರಿಸಿ, ಪದವಿ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಸೂಕ್ತ ಸರ್ಕಾರಿ ಆದೇಶವನ್ನು ಹೊರಡಿಸಿಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-184ರಲ್ಲಿ ಘೋಷಿಸಿರುವಂತೆ ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸ್ವಂತ ಕಟ್ಟಡವನ್ನು ಹೊಂದಿರುವ ಈ ಆದೇಶದ ಅನುಬಂಧದಲ್ಲಿರುವ 25 ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಿ.ಸಿ.ಎಂ.ಬಿ (PCMB) ವಿಭಾಗದೊಂದಿಗೆ ಪ್ರಾರಂಭಿಸಲು ಸರ್ಕಾರದ ಮಂಜೂರಾತಿ ನೀಡಿದೆ.
ಮುಂದುವರೆದು, ಶಾಲೆಗೆ 07 ಹುದ್ದೆಗಳಂತೆ 25 ಶಾಲೆಗಳಿಗೆ ಒಟ್ಟು 175 ಹುದ್ದೆಗಳನ್ನು ಈ ಕೆಳಕಂಡಂತೆ ಸೃಜಿಸಿದೆ. ಸದರಿ ಹುದ್ದೆಗಳ ಎದರಾಗಿ 175 ಅತಿಥಿ ಉಪನ್ಯಾಸಕರನ್ನು ಪಡೆದು ಕೆಲಸ ನಿರ್ವಹಿಸತಕ್ಕದ್ದು.