Visitors have accessed this post 127 times.
ಮಂಗಳೂರು: ದ.ಕ ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಟ್ಟು 54.36 ಕೋಟಿ ನಷ್ಟವಾಗಿದೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಇನ್ನು 20 ಕೋಟಿ ರೂ. ವಿಕೋಪ ನಿರ್ವಹಣೆಗೆ ಹಣ ಇದೆ. ಅದ್ಯಪಾಡಿ, ಕೆತ್ತಿಕಲ್‌ಗೆ ಪರಿಹಾರ ಕಂಡು ಹಿಡಿಯಲು ತಜ್ಞರ ತಂಡದಿಂಲೂ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದೆ. ಮಳೆ ಹಾನಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ. ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಟ್ಟು 54.36 ಕೋಟಿ ನಷ್ಟವಾಗಿದೆ ಎಂದರು. ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಇದುವರೆಗೆ 11 ಮಂದಿ ಜೀವ ಕಳೆದುಕೊಂಡಿದ್ದಾರೆ. 154 ಮನೆಗಳು ಪೂರ್ತಿ ಹಾನಿ, 484 ಮನೆಗಳು ಭಾಗಶಃ ಹಾನಿಯಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ನಿರಂತರ ಮಳೆಗೆ ಒಟ್ಟು 65 ಬ್ರಿಜ್ ಡ್ಯಾಮೆಜ್ ಆಗಿದೆ. 3 ಕಾಳಜಿ ಕೇಂದ್ರ ಇದ್ದು, 138 ಮಂದಿ ಆಶ್ರಯ ಪಡೆದಿದ್ದಾರೆ. ಪೂರ್ತಿ ಹಾನಿಯಾದ ಮನೆಗೆ 1.20 ಲಕ್ಷ, ಪ.ಜಾತಿ, ಪ.ಪಂಗಡಗಳಿಗೆ 1.50 ಲಕ್ಷ ರೂ. ಅನಧಿಕೃತ ಮನೆಗೆ 1 ಲಕ್ಷ ಪರಿಹಾರ, ಭಾಗಶಃ ಹಾನಿಯಾದ ಮನೆಗೆ 50 ಸಾವಿರ, ಉಪಕರಣ ಹಾನಿಗೆ 5 ಸಾವಿರ ಜೊತೆಗೆ ಹಾನಿಯಾದ 18 ಅಂಗನವಾಡಿಗೆ 37 ಲಕ್ಷ, 106 ಶಾಲಾ ದುರಸ್ತಿಗೆ 1.94 ಕೋಟಿ ರೂ. ನೀಡಲಾಗಿದೆ. ಮಳೆಹಾನಿಗೆ ತಕ್ಷಣ ಪರಿಹಾರ ನೀಡಲು ಗ್ರಾಮ ಪಂಚಾಯತ್‌ಗಳಿಗೂ ಅನುದಾನ ಕೊಡಲಾಗಿದೆ.