ಭಾರತದ ಒಟ್ಟು ಜನ ಸಂಖ್ಯೆಯ ಶೇಕಡ 50% ಕ್ಕಿಂತ ಹೆಚ್ಚು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಗ್ರಾಮೀಣ ಅಭಿವೃದ್ಧಿಯು ಗ್ರಾಮದ ಜನರ ಜೀವನದ ಎಲ್ಲಾ ಅಂಶಗಳನ್ನು ಸುಧಾರಿಸುವ ನಿರಂತರ ಮತ್ತು ಸಮಗ್ರ ಸಾಮಾಜಿಕ-ಆರ್ಥಿಕ
ಪ್ರಕ್ರಿಯೆಯಾಗಿದೆ. ಸರಕಾರವು ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ಜನರ ಕುಂದು- ಕೊರತೆ ನಿವಾರಿಸಲು ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದಿರುತ್ತದೆ. ಸರಕಾರವು ಪಂಚಾಯತ್‌ಗಳಿಗೆ ಅನುದಾನ ಹಾಗೂ ಸಂಪನ್ಮೂಲ ಕ್ರೋಢಿಕರಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಚೈತನ್ಯ ತುಂಬುತ್ತಿದೆ.
ಪಂಚಾಯತ್‌ಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ, ವಿದ್ಯುತ್, ನೈರ್ಮಲ್ಯ, ಸಾರಿಗೆ, ಆಸ್ಪತ್ರೆ ಸೇರಿದಂತೆ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸಿ ಕೃಷಿ ಹೈನುಗಾರಿಕೆಗಳಿಗೆ ಒತ್ತು ನೀಡಿ ಜನರ ಆರ್ಥಿಕ, ಸಾಮಾಜಿಕ ಸ್ಥಿತಿ ಉತ್ತಮಗೊಳಿಸುವ ಗುರುತರ ಜವಾಬ್ದಾರಿ ಇದೆ.
ತುಳುನಾಡ ರಕ್ಷಣಾ ವೇದಿಕೆಯು ಕಳೆದ 15 ವರ್ಷಗಳಿಂದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ನಿರಂತರವಾಗಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಜನರಿಗೆ
ಅನುಕೂಲವಾಗುವಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ಜನರ ಕುಂದುಕೊರತೆ ನಿವಾರಣೆಗಾಗಿ ಪಂಚಾಯತ್ ವ್ಯಾಪ್ತಿಗಳಲ್ಲಿ ಜನಜಾಗೃತಿ ಕಾರ್ಯಕ್ರಮ, ವಿಚಾರಸಂಕಿರಣ ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಿ, ಗ್ರಾಮೀಣ ಜನರ ಪ್ರೀತಿಗೆ ಪಾತ್ರವಾಗಿದೆ.
ಇದೀಗ ಉಡುಪಿ ಜಿಲ್ಲೆಯ ಪಂಚಾಯತ್‌ಗಳಿಗೆ ಸಾರ್ವಜನಿಕರು ತಮ್ಮ ಅಹವಾಲು, ಕುಂದು ಕೊರತೆ ಇನ್ನಿತರ ಕೆಲಸ ಕಾರ್ಯಗಳಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಅವರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಆಗುತ್ತಿರುವ ಬಗ್ಗೆ ನಮ್ಮ ತುಳುನಾಡ ರಕ್ಷಣಾ ವೇದಿಕೆಯ ಸದಸ್ಯರ ಗಮನಕ್ಕೆ ಹಲವಾರು ಬಾರಿ ಬಂದಿರುತ್ತದೆ. ಆದುದರಿಂದ ಜನರ ಸಮಸ್ಯೆಗಳ ಬಗ್ಗೆ ಪಂಚಾಯತ್‌ಗಳು ಶೀಘ್ರವಾಗಿ ಗಮನ ಹರಿಸಲು ಮತ್ತು ಸರಕಾರಗಳ ಯೋಜನೆಗಳು ಜನರಿಗೆ ಮುಟ್ಟುವಂತೆ ಮಾಡುವ ದೃಷ್ಟಿಯಿಂದ ದಿನಾಂಕ 01-08-2024ರಂದು ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮ ಪಂಚಾಯತಿನಿಂದ ಪ್ರಾರಂಭಿಸಿ ಬಳಿಕ ಹಂತ ಹಂತವಾಗಿ ಪ್ರತೀ ಗ್ರಾಮ ಪಂಚಾಯತ್‌ನ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ, ಸದಸ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಜನರ ಸಮಸ್ಯೆಯನ್ನು ಪಂಚಾಯತ್‌ನ ಗಮನಕ್ಕೆ ತರುವ ಜನರ ಮತ್ತು
ಪಂಚಾಯತ್‌ನ ನಡುವೆ ಉತ್ತಮ ಬಾಂಧವ್ಯ ಮೂಡಿಸುವ ನಮ್ಮ ನಡೆ ಪಂಚಾಯತ್ ಕಡೆ ಎಂಬ ಅಭಿಯಾನ ಹಮ್ಮಿಕೊಂಡಿರುತ್ತೇವೆ.
* ಸಾರ್ವನಿಕರಿಗೆ ನಿರಂತರ ನೀರು ಪೂರೈಕೆ ಬಗ್ಗೆ ಕ್ರಮ ಕೈಗೊಳ್ಳುವುದು
* ಸಾರ್ವಜನಿಕರಿಗೆ ಸಮರ್ಪಕ ದಾರಿದೀಪ ಕಲ್ಪಿಸುವುದು.
* ಸಾರ್ವಜನಿಕರ ಉತ್ತಮ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ
* ಸಾರ್ವಜನಿಕರಿಗೆ ಉತ್ತಮ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು.
* ಅರ್ಜಿ ನಮೂನೆ ೯ ಮತ್ತು ೧೧ಎ/೧೧ಬಿ ಕುರಿತು ಆಗುವ ಲೋಪದೋಷಗಳ ಸರಿಪಡಿಸುವಿಕೆ
* ಸಾರ್ವಜನಿಕರು ಕಟ್ಟಡ ನಿರ್ಮಾಣ ಕುರಿತು ಪಂಚಾಯತ್‌ಗೆ ನೀಡಿರುವ ಅರ್ಜಿ ಶೀಘ್ರ ವಿಲೇವಾರಿ ಮಾಡುವುದು.
* ತ್ವರಿತವಾಗಿ ಉದ್ಯಮ ಪರವಾನಿಗೆ ನವೀಕರಣ ಮಾಡುವುದು
* ಸಾರ್ವಜನಿಕರಿಗೆ ಸರಕಾರದ ಅನುದಾನ ಒದಗಿಸುವುದು
* ನೆರೆ ಬಂದಲ್ಲಿ ತ್ವರಿತ ಕ್ರಮ ಕೈಗೊಳ್ಳುವುದು
* ಸಾರ್ವಜನಿಕ ಸ್ಥಳದಲ್ಲಿ ನಾಯಿಗಳ ಕಾಟ ಹೆಚ್ಚಾದಲ್ಲಿ ಕ್ರಮ ಕೈಗೊಳ್ಳುವುದು
* ಹಿರಿಯ ನಾಗರಿಕರು ತಮ್ಮ ಸೌಲಭ್ಯಗಳನ್ನು ಪಡೆಯಲು ವಿಳಂಬ ಮಾಡದೆ ಕಾರ್ಯ ನಿರ್ವಹಿಸುವುದು
* ರಸ್ತೆ ಬದಿಯ ಸಾರ್ವಜನಿಕ ಪ್ರದೇಶದಲ್ಲಿ ಮರಗಳಿಂದ ಯಾವುದೇ ಹಾನಿ ಉಂಟಾಗದಂತೆ ಜಾಗೃತಿ ವಹಿಸುವುದು
* ಪಂಚಾಯತ್ ವ್ಯಾಪ್ತಿಯಲ್ಲಿ ನಕಲಿ ವೈದ್ಯರ ಹಾವಳಿ ಬಗ್ಗೆ ಕ್ರಮ ಕೈಗೊಳ್ಳುವುದು ಮತ್ತು ಜನರಿಗೆ ಜಾಗೃತಿ ಮೂಡಿಸುವುದು*ಪಂಚಾಯತ್ ವ್ಯಾಪ್ತಿಯಲ್ಲಿ ಕಲ್ಲಿನ ಕೋರೆಗೆ ಅನುಮತಿ ನೀಡುವಾಗ ಸ್ಥಳೀಯರ ನಿರಪೇಕ್ಷಣಾ ಪತ್ರ ಪಡೆಯುವುದು ಸೇರಿದಂತೆ ಸರಕಾರದ ನೀತಿ ನಿಯಮಗಳ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳುವುದು
*ಇತ್ತೀಚೆಗೆ ಹಲವಾರು ಹಣಕಾಸು ಸಂಸ್ಥೆಗಳು ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿದ ಬಳಿಕ ಬಾಗಿಲು ಮುಚ್ಚುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಇದರಿಂದಾಗಿ ಹಲವಾರು ಜನರು ಮಾನ, ಪ್ರಾಣ ಹಾಗೂ ಆಸ್ತಿಗಳನ್ನು
ಕಳೆದುಕೊಂಡಿರುವುದು ಬೆಳಕಿಗೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಹಣಕಾಸಿನ ಸಂಸ್ಥೆಗಳಿಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಸಂಸ್ಥೆಯವರಿಗೆ ಸರಕಾರದ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸುವಂತೆ ನಿರ್ದೇಶನ ನೀಡುವುದು ಕಾನೂನು ಉಲ್ಲಂಘಿಸಿದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು.
ಮೇಲ್ಕಂಡ ವಿಷಯಗಳನ್ನು ಪ್ರಾಮಾಣಿಕವಾಗಿ ಭ್ರಷ್ಟಚಾರ ರಹಿತವಾಗಿ ಕಾರ್ಯ ನಿರ್ವಹಿಸಿ ಸರ್ವರ ಪ್ರೀತಿಗೆ ಪಾತ್ರವಾಗಬೇಕಾಗಿ ವಿನಂತಿಸುತ್ತಿದ್ದೇವೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ದೂರು ಬಂದಲ್ಲಿ ತಮ್ಮ ಕಛೇರಿಯ ಎದುರು
ಪ್ರತಿಭಟನಾ ಸಭೆ ಹಾಗೂ ಇನ್ನಿತರ ನ್ಯಾಯಯುತ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ. ನಾವು ನೀವು ಜೊತೆಯಾಗಿ ಉತ್ತಮ ಆಡಳಿತ ಜನರಿಗೆ ಸಿಗುವಲ್ಲಿ ಮಹತ್ವವಾದ ಹೆಜ್ಜೆ ಇಡೋಣ ಎಂಬ
ಆಶಯ ನಮ್ಮ ನಡೆ ಪಂಚಾಯತ್ ಕಡೆ ಎಂಬ ಅಭಿಯಾನ ಪ್ರಾರಂಭಿಸಲಾಗಿದೆ. ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ತಿಳಿಸಿದರು. ಉಪ್ಪುರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ , ಉಪಾಧ್ಯಕ್ಷ ಸತೀಶ್ ಅಮ್ಮುಂಜೆ ಮನವಿ ಪತ್ರ ಸ್ವೀಕರಿಸಿದರು ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜ ಜಿಲ್ಲಾಧ್ಯಕ್ಷರಾದ ಕೃಷ್ಣಕುಮಾರ್ ಉಪಾಧ್ಯಕ್ಷರಾದ ಜಯರಾಮ ಪೂಜಾರಿ ಕಾರ್ಮಿಕ ಅಧ್ಯಕ್ಷರಾದ ಜಯ ಪೂಜಾರಿ ಲಕ್ಷ್ಮಿನಗರ, ಯುವ ಘಟಕದ ಅಧ್ಯಕ್ಷರಾದ ವೇಣು ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅಜರುದ್ದೀನ್, ಕಾಪು ತಾಲೂಕು ಮಹಿಳಾ ಅಧ್ಯಕ್ಷರಾದ ಅನುಸೂಯ ಬ್ರಹ್ಮಾವರ ತಾಲೂಕು ನಾಗಲಕ್ಷ್ಮಿ ,ಅಧ್ಯಕ್ಷರಾದ ಸತೀಶ್ ಪೂಜಾರಿ ಕೋಶಾಧಿಕಾರಿ ಸುನಂದ ಕೋಟ್ಯಾನ್,ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ರೋಷನ್ ಬಂಗೇರ, ಪ್ರೀತಮ್, ಸುಭಾಷ್, ಮಮತಾ, ಸಲಾವೂದ್ದೀನ್ , ಅನಿಲ್ , ಮಜೀದ್, ಲಕ್ಷ್ಮೀಬಾಯಿ, ಜ್ಯೋತಿ, ಸಂಗೀತ ಶೆಟ್ಟಿ. ಕಾಪು ತಾಲೂಕು ಅಧ್ಯಕ್ಷರಾದ ಹರೀಶ್ ಶೆಟ್ಟಿ ವಿನ್ಸೆಂಟ್ ಡಿಸೋಜಾ ರೋಹಿಣಿ ಶೆಟ್ಟಿ , ಅರುಣ್ ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.