Visitors have accessed this post 184 times.
ಗ್ರಾಹಕರ ಬೇಡಿಕೆಯನ್ನು ಪೂರೈಸುವಲ್ಲಿ ಸಂಸ್ಥೆಯಿಂದ ಮಹತ್ವದ ಹೆಜ್ಜೆ ಇಟ್ಟಿರುವ ಅಡ್ವಾನ್ಸ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್ ಮಂಗಳೂರಿನ ಬಳ್ಳಾಲ್ ಭಾಗ್ ನಲ್ಲಿ ಶುಭಾರಂಭವಾಗಿದ್ದು ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉದ್ಘಾಟನೆ ನೆರವೇರಿಸಿದರು.
ಕೂದಲಿನ ಮರು ಬೆಳವಣಿಗೆ ಮತ್ತು ತ್ವಚೆಯ ಚಿಕಿತ್ಸೆಯಲ್ಲಿ ದೇಶದ ಮುಂಚೂಣಿ ಸಂಸ್ಥೆಯಾಗಿರುವ ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್ ಮಂಗಳೂರಿನಲ್ಲಿ ಭಾನುವಾರ ಶುಭಾರಂಭಗೊಂಡಿತು.ಈ ಹೊಸ ಕ್ಲಿನಿಕ್ ಆರಂಭವನ್ನು ಸಂಸ್ಥೆಯು ಹೆಮ್ಮೆಯಿಂದ ಘೋಷಿಸಿದೆ. ಅಗತ್ಯ ಸ್ವಾಸ್ಥ್ಯ ಸೇವೆಗಳಿಗೆ ಗ್ರಾಹಕರಿಂದ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ಮಹತ್ವದ ಹೆಜ್ಜೆಯಂನ್ನಿಟ್ಟಿದೆ.
ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಇನ್ ಲ್ಯಾಂಡ್ ಗ್ರೂಪ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಉಪಸ್ಥಿತರಿದ್ದರು. ಬ್ರಾಂಡ್ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶರಣ್ ವೇಲ್ ಜೆ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಫ್ರ‍್ಯಾಂಚೈಸ್ ಪಾಲುದಾರರಾದ ವಿಮಲಾ ಮತ್ತು ಕಾರ್ತಿಕ್ ಉಪಸ್ಥಿತರಿದ್ದರು.
ಅನಿಯಮಿತ ಸೇವೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೂದಲಿನ ಮರು ಬೆಳವಣಿಗೆಗೆ ಅಗತ್ಯ ಪರಿಹಾರಗಳನ್ನು ಒದಗಿಸಲೆಂದೇ ಸಮರ್ಪಿತವಾಗಿರುವ ಅಡ್ವಾನ್ಸ್ಡ್ ಗ್ರೋಹೇರ್ &ಗ್ಲೋ ಸ್ಕಿನ್ ಕ್ಲಿನಿಕ್ ಹಲವು ಬಗೆಯ ಚಿಕಿತ್ಸೆಗಳನ್ನು ಹೊಂದಿದೆ. ಅದರಲ್ಲಿ ಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಲ್ಲದ ವಿಧಾನಗಳೂ ಒಳಗೊಂಡಿವೆ. ಪರ್ಕ್ಯುಟೇನಿಯಸ್ , ಎಫ್ ಯು ಇ ಹೇರ್ ಟ್ರಾನ್ಸ್ಪ್ಲಾಂಟ್, ಸ್ಟೆಕ್ಸ್ ೨೭ ಟಿಎಂ ಪಿ ಆರ್ ಪಿ ಪ್ರೊ +, ಲೇಸರ್ ಹೇರ್ ಥೆರಪಿ, ಕಾಸ್ಮೆಟಿಕ್ ಸಿಸ್ಟಮ್, ಜಿಎಫ್ ಸಿ ಫೈಬ್ರಿನ್ ಟಿಎಂ ಚಿಕಿತ್ಸೆಗಳ ಪಟ್ಟಿಯಲ್ಲಿ ಸೇರಿವೆ. ಈ ಎಲ್ಲ ಚಿಕಿತ್ಸೆಗಳಿಗೆ ಯುಎಸ್-ಎಫ್?ಡಿಎಯಿಂದ ಸಂಪೂರ್ಣ ಅನುಮೋದನೆ ದೊರಕಿದೆ ಎಂದು ಸಂಸ್ತೆಯ ಮುಖ್ಯಸ್ತರು ತಿಳಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಜನರು ತಮ್ಮ ದಿನನಿತ್ಯದ ಕೆಲಸಗಳ ಒತ್ತಡದಲ್ಲಿ ಕೂದಲಿನ ಮೇಲೆ ಹೆಚ್ಚು ಆಸಕ್ತಿ ವಹಿಸದೆ ಇರುವುದರಿಂದ ಕೂದಲು ಉದುರುವಿಉಕೆ ಪ್ರಾರಂಬವಾಗಿ ಬೋಳು ತಲೆಯಾಗುತ್ತದೆ ಇಂದು ಈ ಸಂಸ್ತೆಯು ಕೂದಲು ಉದುರುವುಕೆ ಹಾಗು ಮುಖ ಕಾಂತಿಯನ್ನು ಹೆಚ್ಚಿಸುವ ಸಲುವಾಗಿ ಗ್ರಾಹಕರ ಸೇವೆಗೆ ಅಡ್ವಾನ್ಸ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್ ಅನ್ನು ಮಂಗಳೂರಿನಲ್ಲಿ ಪ್ರಾರಂಬಿಸಿದ್ದು ಇದರ ಉಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.