Visitors have accessed this post 1283 times.

ರಾವ್ ಆಂಡ್ ರಾವ್ ಸರ್ಕಲಲ್ಲಿ ಕಟ್ಟಂ ಚಹ ಸವಿದ ಯು.ಟಿ.ಖಾದರ್

Visitors have accessed this post 1283 times.

ಮಂಗಳೂರು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಇಂದು ಸಂಜೆ ನಗರದ ರಾವ್ ಆಂಡ್ ರಾವ್ ಸರ್ಕಲಿನಲ್ಲಿರುವ ಕ್ಯಾಂಟೀನಿಗೆ ಭೇಟಿ ನೀಡಿ ಕಟ್ಟಂ ಚಹ(ಹಾಲು ಸೇರಿಸದ ಚಹ) ಸವಿದರು.
ಕಟ್ಟಕಡ ಎಂದು ಕರೆಯಲಾಗುವ ಗೂಡಂಗಡಿಗಳಲ್ಲಿ ಆಹಾವ ಸೇವಿಸುವ ಸಿಂಪವ್ ಲೈಫ್ ಸ್ಠೈಲಿನ ಸ್ಪೀಕರ್ ಯು.ಟಿ.ಖಾದರ್ ಅವರು ಸರ್ವಿಸ್ ಬಸ್ ಸ್ಟಾಂಡ್ ಪ್ರದೇಶದ ಸಮೀಪದ ರಾವ್ ಆಂಡ್ ರಾವ್ ಸರ್ಕಲಿನಲ್ಲಿರುವ ಕ್ಯಾಂಟೀನಿಗೆ ಭೇಟಿ ನೀಡಿ ಬ್ಲ್ಯಾಕ್ ಟೀ ಜತೆ ನೀರು ದೋಸೆ ಸವಿದರು. ಆಗ ಸಮಯ ರಾತ್ರಿ ಎಂಟಾಗಿತ್ತು.

ಸ್ಪೀಕರ್ ಖಾದರ್ ಅವರು ಆ ಕ್ಯಾಂಟೀನಿಗೆ ಭೇಟಿ ನೀಡಲು ಕಾರಣವು ಇತ್ತು. ಅದು ಅವರದೇ ವಿಧಾನಸಭಾ ಕ್ಷೇತ್ರದ ಕಲ್ಕಟ್ಟ ನಿವಾಸಿ ಆಶ್ರಫ್ ಅವರು ನಡೆಸುತ್ತಿರುವ ಕ್ಯಾಂಟೀನ್ ಅದಾಗಿತ್ತು.
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ದಿನವಿಡೀ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಪುತ್ತೂರಿಗೆ ಭೇಟಿ ನೀಡಿ ಹಿಂತಿರುಗಿದ ಸ್ಪೀಕರ್ ಖಾದರ್ ಅವರು ಆಶ್ರಫ್ ಅವರ ಕ್ಯಾಂಟೀನಿಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಹಲವು ಮಂದಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಖಾದರ್ ಅವರಿಗೆ ಸಲ್ಲಿಸಿದರು.

Leave a Reply

Your email address will not be published. Required fields are marked *