ಕಂಕುಳಲ್ಲಿ ಮಗು ಇಟ್ಡುಕೊಂಡು ಚುನಾವಣೆಗೆ ಇಳಿದ ಕರಾವಳಿಯ ದಿಟ್ಟ ಮಹಿಳೆಯ ಕಥೆ- ಸುರೈಯ್ಯ ಅಂಜುಮ್

ತೊಟ್ಟಿಲ್ಲನ್ನು ತೂಗುವ ಕೈ ದೇಶ ಆಳಬಲ್ಲದ್ದು ಎಂಬ ಹಳೆ ಗಾದೆ ಮಾತು ಇಂದಿನ ಟೆಕ್ನಾಲಜಿ ಯುಗದಲ್ಲೂ ಸಾಬೀತಾಗಿದೆ. ಸಾಮಾನ್ಯವಾಗಿ ಮಹಿಳೆಯರು ಮದುವೆ ಮಕ್ಕಳು ಆದ ಮೇಲೆ ತಮ್ಮ ವೃತ್ತಿ ಬದುಕು ಸಾಮಾಜಿಕ ಬದುಕಿಗೆ ಗುಡ್ ಬೈ ಹೇಳುತ್ತಾರೆ . ಆದರೆ 8 ತಿಂಗಳ ಪುಟ್ಟ ಮಗು ಇದ್ದರು ಚುನಾವಣೆ ಎಂಬ ಅಗ್ನಿ ಪರೀಕ್ಷೆಗೆ ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಸುರೈಯ್ಯ ಅಂಜುಮ್ ಸಜ್ಜಾಗಿದ್ದಾರೆ.

ಯುವ ಕಾಂಗ್ರೆಸ್ ರಾಜ್ಯ ಚುನಾವಣೆ ಅಗಸ್ಟ್ 16 ರಿಂದ ಪ್ರಾರಂಭವಾಗಲಿದ್ದು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಯುವ‌ ಮತಗಳು ಅಂದರೆ 18-35 ವರ್ಷದ ವಯೋಮಾನದ ಯುವಕರು ಕಾಂಗ್ರೆಸ್ ಮೆಂಬರ್ ಶಿಪ್ ಪಡೆದು ಮತಚಲಾಯಿಸಬಹುದು.


ಪತ್ರಕರ್ತೆ ಸುರೈಯ್ಯ ಅಂಜುಮ್ ಮೂಲತಃ ಉಡುಪಿ ಜಿಲ್ಲೆಯವರು. ತಮ್ಮ ತೀಕ್ಷ್ಣ ಬರಹ ಹಾಗೂ ನೇರ ನುಡಿಯಿಂದ ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಿರುತ್ತಾರೆ.

ಪುಟ್ಟ ಮಗುವಿನೊಂದಿಗೆ ಚುನಾವಣೆ ಹೇಗೆ ಎದುರುಸುತ್ತಿರಿ ಎಂಬ ಪ್ರಶ್ನೆಗೆ ಸುರೈಯ್ಯ ಅಂಜುಮ್ ಉತ್ತರ‌

ಚುನಾವಣೆ ಎಂದಾಗ ಮನಸ್ಸಿನಲ್ಲಿ ಮೊದಲು ಮೂಡಿದ್ದೆ ಸಮಯ. 8 ತಿಂಗಳ ಮಗುವಿನ ಜವಬ್ದಾರಿಯೊಂದಿಗೆ ಸಾಮಾಜಿಕ ರಂಗದಲ್ಲಿ ಹೆಣ್ಣುಮಕ್ಕಳ ಪರ ಧ್ವನಿ ಎತ್ತುವ ಕೆಲಸವು ನನಗೆ ಅಷ್ಟೇ ಪ್ರಮುಖವಾದದ್ದು. ರಾಜಕೀಯ ರಂಗದಲ್ಲಿ ಹೆಣ್ಣು ಮಕ್ಕಳು ಬರಬೇಕು. ಶೋಷಿತರ ಪರ ಧ್ವನಿ ಆಗಬೇಕು. ಹಾಗಾಗಿ ಕುಟುಂಬದ ನಿರ್ವಹಣೆಯ ಜೊತೆ ಜೊತೆಗೆ ಸಾಮಾಜಿಕ ಜವಬ್ದಾರಿ ಬಹಳಷ್ಟಿದೆ. ಅದನ್ನು ನಿರ್ವಹಿಸುವ ಶಕ್ತಿ ದೇವರು ಪ್ರತಿಯೊಬ್ಬ ಹೆಣ್ಣು ಜೀವಕ್ಕೆ ಕೊಟ್ಟಿರುತ್ತಾನೆ ಎಂದು ನಂಬಿದ್ದೇನೆ. ಇನ್ನು ಯುವಕರ ಯೋಚನೆ ದೇಶದ ಪ್ರಗತಿ ಹಾಗೂ ದೇಶ ಪ್ರೇಮ ಇದ್ದರೆ ಪ್ರಜೆಗಳ ಅಭಿವೃದ್ಧಿ ಸಾಧ್ಯ. ಹಾಗಾಗಿ ನನ್ನ ರಾಜಕೀಯ ನಡೆಗೆ ಜನರ ಪ್ರೀತಿ ಸಿಗಲಿದೆ ಎಂಬುವ ನಂಬಿಕೆ ನನಗಿದೆ ಎನ್ನುತ್ತಾರೆ.

Leave a Reply