ಮಂಗಳೂರು: ನಗರದ ಲಾಲ್‌ಬಾಗ್ ಬಳಿಯ ಹೊಟೇಲ್ ಬಳಿ ಯುವಕರ ತಂಡವೊಂದು ಅಸಭ್ಯವಾಗಿ ವರ್ತಿಸಿ ತನ್ನ ಮೇಲೆ ಹಲ್ಲೆಗೈದಿದ
ರವಿವಾರ ರಾತ್ರಿ ನಗರದ ಲಾಲ್‌ಬಾಗ್‌ನಲ್ಲಿರುವ ಎಂಸಿಸಿ ಕಟ್ಟಡದ ಮುಂಭಾಗದಲ್ಲಿರುವ ಹೋಟೆಲ್‌ಗೆ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದೆ. ರಾತ್ರಿ 11 ಗಂಟೆಗೆ ಊಟ ಮುಗಿಸಿ ಬಿಲ್ ಕೊಟ್ಟ ಬಳಿಕ ವಾಶ್‌ರೂಗೆ ಹೋಗಿದ್ದೆ. ಅಲ್ಲಿ ಮಹಿಳಾ ಶೌಚಾಲಯದಲ್ಲಿ ಪುರುಷನೊಬ್ಬನಿದ್ದ. ಅಲ್ಲಿಂದ ಹೊರ ಬಂದಾಗ ಮತ್ತಿಬ್ಬರು ಯುವಕರು ಅಸಭ್ಯವಾಗಿ ತನಗೆ ತಮಾಷೆ ಮಾಡಿದ್ದಾರೆ. ಈ ಬಗ್ಗೆ ಕ್ಯಾಶ್ ಕೌಂಟರ್ ನಲ್ಲಿ ತಿಳಿಸಿದಾಗ, ಕ್ಷಮೆ ಕೇಳಿ ಸಮಸ್ಯೆ ಇತ್ಯರ್ಥವಾಗಿತ್ತು.
ಅಲ್ಲಿಂದ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ಕಾರು ರಿವರ್ಸ್ ತೆಗೆಯುತ್ತಿದ್ದ ವೇಳೆ ಕಾರಿನ ಹಿಂದಿದ್ದ ಬುಲೆಟ್ ಬೈಕ್‌ನಲ್ಲಿದ್ದವನು ನಮ್ಮನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಈ ವೇಳೆ ನನ್ನ ಜೊತೆಗಿದ್ದವರು ಆತನನ್ನು ಪ್ರಶ್ನಿಸಿ ಮಾತಿಗೆ ಮಾತು ಬೆಳೆದಿದೆ. ಸ್ಥಳದಲ್ಲಿ 25ರಷ್ಟು ಮಂದಿ ಜಮಾಯಿಸಿದ್ದು, ಅವರಲ್ಲೊಬ್ಬ ನನ್ನ ಜೊತೆಗಿದ್ದವರಿಗೆ ಹಲ್ಲೆಗೈದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ತನ್ನನ್ನು ಹಿಂದಕ್ಕೆ ದೂಡಿದ್ದಾರೆ. ಮತ್ತೊಬ್ಬ ಬಂದು ನನ್ನ ಕಪಾಳಕ್ಕೆ ಹೊಡೆದಿದ್ದು, ಇನ್ನೊಬ್ಬಾತ ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ವೀಡಿಯೊದಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ಕೂಡಾ ದಾಖಲಾಗಿದೆ. ಹಲ್ಲೆ ಮಾಡಿದವರು ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ನಮಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಆದರೆ, ಈವರೆಗೆ ಹೊಟೇಲ್‌ನವರು ಸಿಸಿ ಟಿವಿ ಫೂಟೇಜ್ ನೀಡಿಲ್ಲ. ಪೊಲೀಸರು ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಬೇಕು ಎಂದು ಯುವತಿ ಆಗ್ರಹಿಸಿದ್ದಾರೆ.