Visitors have accessed this post 854 times.
ಜಿಲ್ಲೆಯ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಗಲಾಟೆಯಾಗಿದೆ. ನಾಲ್ವರು ಕೈದಿಗಳು ಹೊಡೆದಾಡಿಕೊಂಡಿದ್ದು, ಓರ್ವನ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ.
ಕಾರವಾರದ ಜಿಲ್ಲಾ ಕಾರಾಗೃಹದಲ್ಲಿನ ಕೈದಿಗಳ ನಡುವೆ ಗಲಾಟೆಯಾಗಿದೆ. ಜೈಲಿನಲ್ಲಿ ನಾಲ್ವರು ಕೈದಿಗಳ ನಡುವೆ ಗಲಾಟೆಯಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ನಾಲ್ವರು ಕೈದಿಗಳ ನಡುವಿನ ಗಲಾಟೆಯಲ್ಲಿ ಓರ್ವ ಕೈದಿಯ ತೆಲೆಗೆ ಗಂಭೀರ ಗಾಯವಾಗಿದ್ದು, ರಕ್ತಸ್ತ್ರಾವ ಉಂಟಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ವಿಷಯ ತಿಳಿದು ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಎಎಸ್ ಪಿ ಜಯಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೈದಿಗಳ ನಡುವೆ ಗಲಾಟೆ ಯಾವ ಕಾರಣಕ್ಕೆ ಆಗಿದೆ ಎನ್ನುವ ಬಗ್ಗೆ ತಿಳಿದು ಬರಬೇಕಿದೆ.