Visitors have accessed this post 756 times.

ವಿಟ್ಲ: ಸರಕಾರಿ ಶತಮಾನದ ಶಾಲೆ ಕೋಡಪದವಿನಲ್ಲಿ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ಶಿಬಿರ

Visitors have accessed this post 756 times.

ಯಾನೇಪೋಯ ಇನ್ಸ್ಟಿಟ್ಯೂಟ್ ,ಕಲೆ, ವಿಜ್ಞಾನ, ವಾಣಿಜ್ಯ ವಿಭಾಗ ಮತ್ತು ಮ್ಯಾನೇಜ್ಮೆಂಟ್- ರಾಷ್ಟ್ರೀಯ ಸೇವಾ ಯೋಜನೆ ಘಟಕ 10,ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಕೋಡಪದವು, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟರ,ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆ( ರಿ),ವಿಟ್ಲ ದ್ವನಿಬೆಳಕು ಗೆಳೆಯರ ಬಳಗ ಹಾಗೂ ಎಮರ್ಜೆನ್ಸಿ ಟೀಂ ಕೋಡಪದವು ಇದರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಹಾಗೂ ರಕ್ತದಾನ ಶಿಬಿರವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಡಪದವು ಇಲ್ಲಿ SDMC ಅದ್ಯಕ್ಷರಾದ ಉಮ್ಮರ್ ಪಾರೂಕ್ ಟೆಕ್ನಿಕ್ ಅವರ ಅದ್ಯಕ್ಷತೆಯಲ್ಲಿ ಜರುಗಿತು.ಸಮಾರಂಭದ ಉದ್ಘಾಟನೆಯನ್ನು ಈ ಶಾಲೆಯ ಹಳೆವಿದ್ಯರ್ಥಿಯೂ ಪ್ರಗತಿಪರ ಕೃಷಿಕರು,ಶಿಕ್ಷಣ ಪ್ರೇಮಿ ಬೈಲು ಗೋಪಾಲಕೃಷ್ಣ ಭಟ್ ಕಿನಿಲ ತೆಂಗಿನ ಗಿಡಕ್ಕೆ ನೀರು ಎರೆಯುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರೂ,ಸ್ಥಳೀಯ ಸದಸ್ಯರಾದ ರವೀಶ್ ಶೆಟ್ಟಿ ಕರ್ಕಳ ಮಾತಾಡಿ ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಆರೋಗ್ಯವಂತ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಸ್ವಯಂ ಆರೋಗ್ಯವನ್ನು ಕಾಪಾಡಬಹುದು ಮತ್ತು ಇಂತಹ ಆರೋಗ್ಯಕ್ಕೆ ಸಂಬಂದಿಸಿದಂತೆ ಶಿಬಿರಗಳನ್ನು ನಡೆಸುವ ಮೂಲಕ ಇಲ್ಲಿನ ಶಾಲಾಭಿವೃದ್ದಿ ಸಮಿತಿಯವರ ನಡೆ ಇತರರಿಗೆ ಮಾದರಿ ಎಂದರು.ಅಲ್ಲದೆ ಒಂದೇ ಸೂರಿನಡಿ ಎಲ್ಲಾ ತಪಾಸಣೆಗಳು ಉಚಿತ ಆರೋಗ್ಯ ಶಿಬಿರದಲ್ಲಿ ಸಿಗುತ್ತಿರುವುದು ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.ನಂತರ ಉದ್ಘಾಟನಕಾರರದ ಬೈಲು ಗೋಪಾಲಕೃಷ್ಣ ಭಟ್ ಕಿನಿಲ ಕೋಡಪದವು ಶಾಲೆಯೊಂದಿಗೆ 85 ಹರೆಯದಲ್ಲೂ ತನಗಿರುವ ಪ್ರೀತಿ, ಒಡನಾಟವನ್ನು ಸಭೆಯಲ್ಲಿ ಹಂಚಿಕೊಂಡರು. ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯ ಸಿರಾಜ್ ಮದಕ ಮಾತಾಡಿ ಈಗ ಜಾಗತಿಕ ಜಗತ್ತು ಬಹಳಷ್ಟು ಬೆಳೆದರು ರಕ್ತಕ್ಕೆ ಪರ್ಯಾಯವಾಗಿ ಯಾವುದೇ ಒಂದು ದ್ರವವನ್ನು ಉತ್ಪಾದಿಸಲು ಇದುವರೆಗೂ ಯಾವುದೇ ಕಂಪೆನಿಗಾಗಲಿ ವಿಜ್ಞಾನಿಗಳಿಗಾಗಳಿ ಸಾದ್ಯವಾಗಲಿಲ್ಲಿ‌ ಎಂದು ಕಾರ್ಯಕ್ರಮ ಯಶಸ್ವಿಗೆ ಶುಭಕೋರಿದರು.

ಉಚಿತ ವೈದ್ಯಕೀಯ ಶಿಬಿರದಲ್ಲಿ ಸ್ತ್ರೀರೋಗ ತಜ್ಞರು,ಕಣ್ಣಿನ ತಜ್ಞರ ವಿಭಾಗ,ಎಲುಬು,ಕೀಲು ಮತ್ತು ಕಿವಿ,ಮೂಗು,ಗಂಟಲು ವಿಬಾಗ,ಸಾಮಾನ್ಯ ವಿಭಾಗದ ನುರಿತ ತಜ್ಞರು ಭಾಗವಹಿಸಿ ಶಿಭಿರಾರ್ಥಿಗಳೊಂದಿಗೆ ಸಮಾಲೋಚನೆ ಮತ್ತು ಸೂಕ್ತ ಚಿಕಿತ್ಸೆಯ ಬಗ್ಗೆ ಮಾಹಿತಿ ಹಾಗೂ ಔಷದಿ ನೀಡಿದರು. ರಕ್ತದಾನ,ವೈದ್ಯಕೀಯ ಶಿಭಿರವು ಬೆಳಿಗ್ಗೆ 9:00 ರಿಂದ 2 ಗಂಟೆಯವರೆಗೆ ನಡೆಯಿತು. 31 ಜನ ರಕ್ತದಾನ ಮಾಡುವುದರೊಂದಿಗೆ ಜೀವದಾನಿಯಾದರು‌.87 ಜನ ವೈದ್ಯಕೀಯ ತಪಾಸಣೆಯ ಫಲಾನುಭವಿಗಳಾದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ SDMC ಸಮನ್ವಯ ವೇದಿಕೆಯ ರಾಜ್ಯದ್ಯಕ್ಷರಾದ ಮೊಯ್ದಿನ್ ಕುಟ್ಟಿ, ಯೆನೆಪೋಯ ಕಣ್ಣಿನ ವಿಭಾಗದ ಮುಖ್ಯಸ್ಥರಾದ ಡಾ. ಸೈಪುದ್ದೀನ್ ಯೆನೆಪೋಯ ಪ್ರೋಗ್ರಾಂ ಆಪಿಸರ್ ಕೆ‌.ಎಮ್.ರಶೀದ್ ,ವಿಟ್ಲಪಡ್ನೂರು ಗ್ರಾ.ಪಂಚಾಯತ್ ಮಾಜಿ ಸದಸ್ಯರಾದ ಸಿದ್ದೀಕ್ ಸರವು,ಎಮರ್ಜೆನ್ಸಿ ಟೀಂ ಕೋಡಪದವು ಇದರ ಅದ್ಯಕ್ಷರಾದ ಮಹಮ್ಮದ್ ರಿಯಾಜ್ ತಾಳಿತ್ತನೂಜಿ, ವಿಟ್ಲ ವಲಯ ದ್ವನಿಬೆಳಕು ಸಂಯೋಜಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಮ್.ಸಿದ್ದೀಕ್ ಅಡ್ಯನಡ್ಕ,ಬಂಟ್ವಾಳ ತಾಲೂಕು ದ್ವನಿಬೆಳಕು ಸಂಯೋಜಕರ ಗೌರವದ್ಯಕ್ಷರಾದ ಸುಬಾನ್ ಮುನ್ನಾ ಮಂಗಿಲಪದವು,ಮಹಮ್ಮದ್ ಹನೀಪ್ ಸರವು,ಬೀಡಿ ಉದ್ದಿಮೆದಾರ ಮಹಮ್ಮದ್ ಕುಕ್ಕಿಲ,ಹಳೆವಿದ್ಯಾರ್ಥಿಗಳು,ನಾಗರೀಕರು ಉಪಸ್ಥಿತರಿದ್ದರು. ಹಳೆವಿದ್ಯಾರ್ಥಿ ಸಂಘದ ಹಸೈನಾರ್ ತಾಳಿತ್ತನೂಜಿ ಸ್ವಾಗತಿಸಿ-ದನ್ಯವಾದ ತಿಳಿಸಿದರು.ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆ- ಘಟಕ 10 ವಿದ್ಯಾರ್ಥಿ ಝುಲ್ಪಿಕರ್ ಅಲಿ ನಿರೂಪಿಸಿದರು.

Leave a Reply

Your email address will not be published. Required fields are marked *