Visitors have accessed this post 264 times.

ಬಂಟ್ವಾಳ: ಕೊಳ್ನಾಡು ನಾರ್ಶ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಭೆ..!

Visitors have accessed this post 264 times.

ಡ್ರಗ್ಸ್ ಪೆಡ್ಲರ್ಗಳ ವಂಚನೆಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಕ್ಯಾಂಪಸ್ ನಿರ್ಮಿಸೋಣ,ಸರಕಾರಿ ಪದವಿಪೂರ್ವ ಕಾಲೇಜು ನಾರ್ಶದ ಶಿಕ್ಷಕ-ರಕ್ಷಕ ಸಭೆಯಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ ಅಭಿಮತ

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ನಾರ್ಶ ಮೈದಾನದಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ಶಿಕ್ಷಕ-ರಕ್ಷಕರ ಸಭೆಯು ಕಾಲೇಜು ಸಭಾಂಗಣದಲ್ಲಿ ಕಾಲೇಜು ಕಾರ್ಯದ್ಯಕ್ಷರಾದ ಹಾಜಿ.ಎನ್.ಸುಲೈಮಾನ್ ಸಿಂಗಾರಿ ಅಧ್ಯಕ್ಷತೆಯಲ್ಲಿ ನಡೆಯಿತು‌.ಶಿಕ್ಷಕ-ರಕ್ಷಕ ಸಭೆಯನ್ನು ಉದ್ದೇಶಿಸಿ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ,ಸ್ಥಳೀಯ ಸದಸ್ಯರಾದ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ ಮಾತಾಡಿ ಈ ಹಿಂದೆ ಪಟ್ಟಣ ಪ್ರದೇಶಗಳಲ್ಲಿ ಕೇಳಿ ಬರುತ್ತಿದ್ದ ಡ್ರಗ್ಸ್ ನಂತಹ ಚಟಗಳು ಮದ್ಯವರ್ತಿ ಸ್ನೇಹಿತರು,ಡ್ರಗ್ಸ್ ಪೆಡ್ಲರ್ಗಳ ಮೂಲಕ ಗ್ರಾಮೀಣ ಪ್ರದೇಶಕ್ಕೂ ಕಾಲಿಡುತ್ತಿರುವುದು ವಿದ್ಯಾರ್ಥಿ ಜೀವನಕ್ಕೆ ಮಾರಕವಾಗುತ್ತಿದೆ.

 

 

ಇದರಿಂದಾಗಿ ಯುವತ್ವದಲ್ಲೇ ಜೀವನ ಕಳೆದುಕೊಂಡ ಉದಾಹರಣೆಗಳು ನಮ್ಮ ಕಣ್ಣಮುಂದೆಯೆ ನಡೆಯುತ್ತಿದೆ.ಪೋಷಕರು ಮಕ್ಕಳಿಗೆ ಮೊಬೈಲ್ ಇತ್ಯಾದಿಗಳಿಂದ ದೂರವಿಡುವ ಮೂಲಕ ಅವರ ದಿನನಿತ್ಯದ ಚಟುವಟಿಕೆಗಳ ಬಗ್ಗೆ ನಿಗ ಇಡುವ ಕಾರ್ಯ ಮಾಡಬೇಕು.ಹದಿಹರೆಯದ ವಿದ್ಯಾರ್ಥಿಗಳು ಕಾಲೇಜು ತಲುಪುವ ಮತ್ತು ಮನೆಗೆ ತಲುಪುವ ಸಮಯದ ಬಗ್ಗೆ ಪೋಷಕರು-ಶಿಕ್ಷಕರೊಂದಿಗೆ ಸಮನ್ವಯ ಸಾದಿಸಿದಾಗ ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಗಮನಕೊಡಲು ಪೂರಕ ವಾತಾವರಣ ಸೃಷ್ಟಿಸಬೇಕೆಂದರು.ಎಲ್ಲೋ ಕೇಳುತ್ತಿದ್ದ ಮಾನಸಿಕ ಖಿನ್ನತೆಯ ಆತ್ಮಹತ್ಯೆಗಳು,ಕ್ರಿಮಿನಲ್,ಅನೈತಿಕ ಚಟುವಟಿಕೆಗಳು ನಮ್ಮ ಅಂಗಲಕ್ಕೂ ತಲುಪುತ್ತಿರುವುದು ಖೇದಕರ.ನಮ್ಮ ಕಾಲೇಜು ಸುಸಜ್ಜಿತವಾದ ಕಟ್ಟಡಗಳು, ,ಉತ್ತಮ ನುರಿತ ಪ್ರಾದ್ಯಾಪಕರನ್ನು,ಸುಸಂಸ್ಕೃತ ವಿದ್ಯಾರ್ಥಿಗಳನ್ನು ಹೊಂದಿದ್ದು ನಮ್ಮ ಗ್ರಾಮಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ.ಈಗೆಯೇ ಮುಂದುವರಿಯಲಿ ಎಂದು ಶುಭಕೋರಿದರು.

ಶಿಕ್ಷಕ-ರಕ್ಷಕ ಸಭೆಯಲ್ಲಿ ಹೈಸ್ಕೂಲ್ ವಿಭಾಗದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಪಾಲಕೃಷ್ಣ ನೇರಳಕಟ್ಟೆ,ಸ್ಥಳೀಯ ನಾರ್ಶದ ನಿವಾಸಿ ಮುಡಿಪು ಕುರ್ನಾಡು ಕಾಲೇಜು ಭೌತಶಾಸ್ತ್ರ ಉಪನ್ಯಾಸಕರಾದ ಲೋಕೇಶ್.ಎನ್.ಅವರು ಸಿದ್ದಪಡಿಸಿರುವ ರೇಡಾನ್ ಲೆವೆಲ್ ಆ್ಯಂಡ್ ರೇಡಿಯೋ ನ್ಯೂಕ್ಲೈಡ್ ಡಿಸ್ಟ್ರಿಬ್ಯೂಷನ್ ಇನ್ ಆ್ಯಂಡ್ ಅಲ್ ರೌಂಡ್ ಸ್ಟೋನ್ ಮೈನ್ಸ್ ಆಪ್ ದಕ್ಷಿಣ ಕನ್ನಡ ಡಿಸ್ಟ್ರಿಕ್ ಆಪ್ ಸೌತ್ ಇಂಡಿಯಾ ಎಂಬ ಮಹಾಪ್ರಬಂದಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ ಪದವಿ ನೀಡಿದುದಕ್ಕಾಗಿ ಪೋಷಕರ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜು ಪ್ರಿನ್ಸಿಪಾಲ್ ರೀಟಾ ಸೈಬಲ್ ಡಿಸೋಜಾ,ಬೊಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕೂಬ್ ದಂಡೆಮಾರ್,ಶಿಕ್ಷಣ ಪ್ರೇಮಿ ಇಸ್ಮಾಯಿಲ್ ಬೊಳಂತೂರು,ಉಪನ್ಯಾಸಕ ವೃಂದ ಉಪಸ್ಥಿತರಿದ್ದರು, ಜಯಶ್ರೀ ಸ್ವಾಗತಿಸಿ,ದನುಶ್ರಿ ಧನ್ಯವಾದ ತಿಳಿಸಿದರು..

Leave a Reply

Your email address will not be published. Required fields are marked *