Visitors have accessed this post 689 times.
ಮಂಗಳೂರು: ಅಂತರ್‌ರಾಷ್ಟ್ರೀಯ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ಮನಪಾ ವ್ಯಾಪ್ತಿಯಲ್ಲಿ ನಡೆಯುವ ಮಾನವ ಸರಪಳಿಯ ಹಿನ್ನಲೆಯಲ್ಲಿ ಸಂಚಾರ ವ್ಯವಸ್ಥೆಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ರಾ.ಹೆ.66ರಲ್ಲಿ ಉಡುಪಿ-ಹೆಜಮಾಡಿ ಗಡಿಯಿಂದ ನಂತೂರು ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ 73ರ ಅರ್ಕುಳ ಫರಂಗಿಪೇಟೆಯವರೆಗೆ ಬೆಳಗ್ಗೆ 7:30ರಿಂದ ಪೂ.11ರವರೆಗೆ ಮಾನವ ಸರಪಳಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಹಾಗಾಗಿ ಸುರಕ್ಷತೆ ದೃಷ್ಟಿಯಿಂದ ಹೆಜಮಾಡಿ-ಕಾರ್ನಾಡು-ಮುಕ್ಕ-ಸುರತ್ಕಲ್- ಪಣಂಬೂರು-ಕೊಟ್ಟಾರ ಚೌಕಿ-ಕುಂಟಿಕಾನ-ಕೆಪಿಟಿ ವೃತ್ತ-ಪದವು ಜಂಕ್ಷನ್- ನಂ ತೂರು-ಬಿಕರ್ನಕಟ್ಟೆ-ಪಡೀಲ್-ಸಹ್ಯಾದ್ರಿ-ವಳಚ್ಚಿಲ್-ಅರ್ಕುಳವರೆಗಿನ ರಾ.ಹೆ. 66ಮತ್ತು 73ರಲ್ಲಿ ಸಂಚರಿಸುವ ಎಲ್ಲ ವಾಹನಗಳ ಮಾಲಕರು, ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಲು ಮಂಗಳೂರು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ