Visitors have accessed this post 632 times.
ಮಂಗಳೂರು: ಕಂಠಪೂರ್ತಿ ಮದ್ಯಪಾನ ಮಾಡಿ ಕೊಳಕು ಬಟ್ಟೆಯಲ್ಲೇ ಚಿಕಿತ್ಸೆ ನೀಡಲು ಪಿಜಿ ಡಾಕ್ಟರ್ ಓರ್ವ ಓಪಿಡಿಗೆ ಬಂದ ಘಟನೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ನಡೆದಿದೆ. ಕುಡಿದು ಬಂದ ಪಿ.ಜಿ.ವೈದ್ಯ ಶ್ರೀಕಾಂತ್ ಎಂಬಾತನನ್ನು ರೋಗಿ ಕಡೆಯವರು ತರಾಟೆಗೆ ತೆಗೆದುಕೊಂಡು ಮೊಬೈಲ್ ನಲ್ಲಿ ವಿಡೀಯೋ ಮಾಡಿ ವೈರಲ್ ಮಾಡಿದ್ದಾರೆ.ಎ.ಜೆ.ಮೆಡಿಕಲ್ ಕಾಲೇಜು-ಆಸ್ಪತ್ರೆಯಲ್ಲಿ ಪಿಜಿ ವೈದ್ಯ ಆಗಿರುವ ಶ್ರೀಕಾಂತ್ ರಾತ್ರಿ ಓಪಿಡಿಯಲ್ಲಿ ಕರ್ತವ್ಯದಲ್ಲಿದ್ದ. ಆಸ್ಪತ್ರೆಗೆ ಬರೋ ವೇಳೆ ಕಂಠಪೂರ್ತಿ ಕುಡಿದು ಎಲ್ಲೋ ರಸ್ತೆ ಬದಿಯಲ್ಲಿ ಬಿದ್ದು ಬಟ್ಟೆಗೆ ಕೆಸರು ತಾಗಿಕೊಂಡಿತ್ತು. ಅದೇ ಕೊಳಕಾದ ಬಟ್ಟೆಯಲ್ಲಿ ಗಲೀಜಾಗಿ ತೂರಾಡುತ್ತಾ ಬಂದು ಓಪಿಡಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ. ಇದನ್ನ ನೋಡಿದ ಆಸ್ಪತ್ರೆಗೆ ಬಂದಿದ್ದ ರೋಗಿಯ ಕಡೆಯವರು ಪಿಜಿ ವೈದ್ಯ ಶ್ರೀಕಾಂತ್ ನನ್ನು ತರಾಟೆಗೆ ತೆಗೆದುಕೊಂಡಿದ್ದು,ಬಳಿಕ ಆತನನ್ನು ಭದ್ರತಾ ಸಿಬ್ಬಂದಿಗಳು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದರು.ಕುಡುಕ ಪಿಜಿ ವೈದ್ಯನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.