Visitors have accessed this post 221 times.
ಮಂಗಳೂರು: ಉಳ್ಳಾಲ ತಾಲ್ಲೂಕಿನ ಸೋಮೇಶ್ವರ ಉಚ್ಚಿಲ ಸಂಕೊಲಿಗೆಯ ಶಕ್ತಿ ಮೈದಾನದಲ್ಲಿ ಶ್ರೀ ಹರ ಅಸೋಸಿಯೇಷನ್ ಮತ್ತು ಶ್ರೀಹರ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ 9,10,11 ರಂದು ನಡೆಯಲಿರುವ ದಾಂಡ್ಯಾ ನೈಟ್ಸ್ ಕಾರ್ಯಕ್ರಮದ ಪೂರ್ವಭಾವಿ ಕಮಿಟಿ ಸಭೆಯು ನಿನ್ನೆ ಸಂಜೆ 6 ಗಂಟೆಯಿಂದ ಆರಂಭಿಸಲಿದ್ದು ಸಭಾಧ್ಯಕ್ಷರಾದ ಶ್ರೀ ಸುಖೇಶ್ ಮಂಜನಾಡಿ, ಪುರೋಹಿತರಾದ ಶ್ರೀ ರಾಮಪ್ರಸಾದ್ ಮಯ್ಯ, ಕಮಿಟಿ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಮಾಡ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಜಾತ ವಿ ಉಚ್ಚಿಲ್ ಸೇರಿದಂತೆ ಕಮಿಟಿಯ ಹಲವು ಸದಸ್ಯರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದ್ದು ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದು, ಪುರೋಹಿತರಾದ ಶ್ರೀ ರಾಮಪ್ರಸಾದ್ ಮಯ್ಯ ಅಕ್ಟೋಬರ್ 8 ನೇ ತಾರೀಖಿನಿಂದ ನಡೆಯಲಿರುವ ದುರ್ಗ ನಮಸ್ಕಾರ ಪೂಜೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಪ್ರವೀಣ್ ಬಸ್ತಿ ಧನ್ಯವಾದ ಭಾಷಣದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.