Visitors have accessed this post 101 times.
ದಿನಾಂಕ 02.10.2024 ರಂದು ಬೆಳಿಗ್ಗೆ 9:30ಕ್ಕೆ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ನಮ್ಮ ಉಡುಪಿ ಸ್ವಚ್ಛ ಉಡುಪಿ ಅಭಿಯಾನ ವನ್ನು ಮಣಿಪಾಲ – ಕೊಳಲಗಿರಿ ಸಂಪರ್ಕಿಸುವ ಶೀಂಬ್ರ ಫೆರಾರಿ ಸೇತುವೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪುರವರು ಚಾಲನೆ ನೀಡಿದರು.
ಯೋಗೇಶ್ ಶೆಟ್ಟಿ ಜಪ್ಪು ಮಾತನಾಡುತ್ತಾ ಈ ಬ್ರಿಡ್ಜ್ ನಲ್ಲಿ ಗಿಡಗಂಟಿಗಳು ಕಸಗಳು ತುಂಬಿದ್ದು ಮಣ್ಣು ಮತ್ತು ವೈಗೆ ರಾಶಿ ಬಿದ್ದಿದ್ದರಿಂದ ಹಲವಾರು ಅಪಘಾತಗಳು ಸಂಭವಿಸಿದ್ದು ಹಾಗೂ ಈ ಪ್ರದೇಶದಲ್ಲಿ ತಡರಾತ್ರಿಯವರೆಗೂ ಮದ್ಯ ಸೇವನೆ ಅಕ್ರಮಕೂಟ, ಧೂಮಪಾನ ನಡೆಸುವವರ ಬಗ್ಗೆ ನಮ್ಮ ಸಂಘಟನೆಗೆ ದೂರು ಬರುತ್ತಿದ್ದು ಶೀಘ್ರವೇ ಸಿ.ಸಿ ಕ್ಯಾಮೆರಾ ಅಳವಡಿಸುವುದು ಮತ್ತು ದಾರಿದೀಪ ವ್ಯವಸ್ಥೆಯನ್ನು ಮಾಡಬೇಕು ಮತ್ತು ಈ ಬ್ರಿಜ್ಜಿನ ಕೆಳಗಡೆ ಪೈಪ್ ಹಾಗೂ ಇತರ ತ್ಯಾಜ್ಯ ವಸ್ತುಗಳು ಶೇಖರಣೆಯಾಗಿದ್ದು ಕೂಡಲೇ ನಗರಸಭೆ ತೆರಗೊಳಿಸುವಂತೆ ಅಗ್ರಹಿಸಿದರು.
ಮುಖ್ಯ ಅತಿಥಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಉಡುಪಿ ನಗರಸಭೆ ಕೌನ್ಸಿಲರ್ ಅನಿತಾ ಕ್ರಿಶ್ಚಿಯನ್ ಯುನಿಟಿ ಪೆರಾಂಪಳ್ಳಿ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್, ಉಪಾಧ್ಯಕ್ಷ ಗಾಡ್ವಿನ್ , ಉಡುಪಿ ಜಿಲ್ಲಾ ವೀಕ್ಷಕರು ಫ್ರಾಂಕಿ ಡಿಸೋಜ ಕೊಳಲಗಿರಿ. ಜಿಲ್ಲಾಧ್ಯಕ್ಷ ಕೃಷ್ಣಕುಮಾರ್ ಇಲ್ಲ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಬ್ರಹ್ಮವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ , ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಾಲ್ ಅಮೀನ್ ಬೆಂಗ್ರೆ, ಕಾರ್ಮಿಕ ಘಟಕ ಸಂಘಟನಾ ರೋಶನ್ ಬಂಗೇರ, ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್ , ಕಾರ್ಮಿಕ ಘಟಕ ಜೊತೆ ಕಾರ್ಯದರ್ಶಿ ಮಜಿದ್ ಮಹಿಳಾ ಕಾರ್ಯಕಾರಿ ಸದಸ್ಯರಾದ ಜ್ಯೋತಿ, ರವಿಜಾ ವಿದ್ಯಾರ್ಥಿ ಘಟಕ ಮುಖಂಡ ಅಭಿಷೇಕ್ ಭಾಗವಹಿಸಿದ್ದರು ಗಾಂಧಿ ಜಯಂತಿ ಆಚರಣೆ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಲು ಉಡುಪಿ ನಗರಸಭೆ , ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಸಂಪೂರ್ಣವಾಗಿ ಸಹಕಾರ ನೀಡಿದರು.