Visitors have accessed this post 362 times.

ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ನಾಪತ್ತೆ |ಕಾರು ಕೂಳೂರು ಸೇತುವೆಯಲ್ಲಿ ಪತ್ತೆ..!!

Visitors have accessed this post 362 times.

ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ನಾಪತ್ತೆಯಾಗಿದ್ದಾರೆ.

ಮಂಗಳೂರಿನ ಕೂಳೂರು ಸೇತುವೆ ಸಮೀಪ ಡ್ಯಾಮೇಜ್ ಆದ ಸ್ಥಿತಿಯಲ್ಲಿ ಅವರ ಕಾರ್ ಪತ್ತೆಯಾಗಿದೆ. ನದಿಯಲ್ಲಿ ಮುಮ್ತಾಜ್ ಅಲಿ ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮುಮ್ತಾಜ್ ಅಲಿ ಮನೆಯಿಂದ ಹೊರ ಹೋಗಿದ್ದಾರೆ. ಕೂಳೂರು ಸೇತುವೆ ಬಳಿ ಅವರ ಕಾರ್ ಪತ್ತೆಯಾಗಿದ್ದು, ನದಿಗೆ ಹಾರಿರಬಹುದೆಂಬ ಶಂಕೆಯಿಂದ ಅವರಿಗಾಗಿ ಹುಡುಕಾಟ ನಡೆಸಲಾಗಿದೆ.

ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್., ಪೊಲೀಸ್ ಸಿಬ್ಬಂದಿ, ಸ್ಥಳೀಯರು ಮುಮ್ತಾಜ್ ಅಲಿ ಅವರಿಗಾಗಿ  ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅಗರ್ವಾಲ್, ಮೊಯಿದ್ದೀನ್ ಬಾವಾ ಅವರೂ ಭೇಟಿ ನೀಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *