ಪಡುಬಿದ್ರಿ: ನವವಿವಾಹಿತೆಗೆ ಕಿರುಕುಳ- ಪತಿಯ ಮನೆಮಂದಿ ವಿರುದ್ಧ ಪ್ರಕರಣ ದಾಖಲು..!

ಪಡುಬಿದ್ರಿ: ನವವಿವಾಹಿತೆ ಮೂಳೂರಿನ ಮಹಿಳೆ ಮೇಲೆ ಹಲ್ಲೆ ನಡೆಸಿ, ಚಿನ್ನವನ್ನೇನೂ ತಾರದೆ ತಮ್ಮ ಮಗನನ್ನು ಬುಟ್ಟಿಗೆ ಹಾಕಿಕೊಂಡೆ ಎನ್ನುತ್ತಾ ಬೈದು ಮನೆ ಬಿಟ್ಟು ತೆರಳುವಂತೆ ಹೀನಾಯವಾಗಿ ವರ್ತಿಸಿದ ಪತಿಯ ಮನೆಯವರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾವ ಇಬ್ರಾಹಿಂ, ಅತ್ತೆ ನಫೀಸಾ, ಬಾವ ಮಹಮ್ಮದ್‌ ಶಂಶೀರ್‌, ಅತ್ತಿಗೆ ಸಾಯಿರಾಬಾನು ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನಾ ಗ್ರಾಮದ ಅಹಮ್ಮದ್‌ ಸಮೀರ್‌ ಅವರನ್ನು ಪ್ರೇಮಿಸಿ ಎರಡೂ ಮನೆಯವರ ಒಪ್ಪಿಗೆಯೊಂದಿಗೆ ಅ. 13ರಂದು ಕಾರ್ಕಳದಲ್ಲಿ ನಡೆದಿದ್ದ ಮದುವೆಯ ಬಳಿಕ ಇನ್ನಾ ಗ್ರಾಮದ ಕಡೆಕುಂಜದ ಪತಿಯ ಮನೆಯಲ್ಲಿ ಮಹಿಳೆ ವಾಸವಿದ್ದರು. ನ. 10ರಂದು ನಡೆದಿದ್ದ ಹಲ್ಲೆ ಬಳಿಕ ಮೂಳೂರಿನ ತನ್ನ ಮನೆಯನ್ನು ಸೇರಿ ಫಿನಾಯಿಲ್‌ ಸೇವಿಸಿ ಅಸ್ವಸ್ಥಗೊಂಡಿದ್ದರು. ಆ ಬಳಿಕ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಇದೀಗ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply