ಮಂಗಳೂರು : ಧರಿಸಿರುವ ಹರಿದ ಶೈಲಿಯ ಹೊಸಟ್ರೆಂಡ್‌ನ ಪ್ಯಾಂಟ್ ಅನ್ನು ಹೊಲಿದಿದ್ದರಿಂದ ಅವಮಾನಿತನಾದ ಯುವಕನೋರ್ವನು ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಶಾಹಿಲ್ (21) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಪ್ರತೀ ಸೋಮವಾರ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ವಾರದ ಸಂತೆ ಇರುತ್ತದೆ. ಈ ಮಾರುಕಟ್ಟೆಗೆ ಶಾಹಿಲ್ ಹರಿದ ಮಾದರಿಯ ವಿನೂತನ ಶೈಲಿಯ ಜೀನ್ಸ್ ಪ್ಯಾಂಟ್ ಧರಿಸಿ ಬೆಳ್ತಂಗಡಿಯ ಸಂತೆಕಟ್ಟೆ ಮಾರುಕಟ್ಟೆಗೆ ಬಂದಿದ್ದ. ಈ ವೇಳೆ ಶಬೀರ್, ಅನೀಶ್ ಪಣಕಜೆ, ಸಲೀಂ ಎಂಬ ಶಾಹಿಲ್‌ನ ಮೂವರು ಸ್ನೇಹಿತರು ಸೇರಿ ಪ್ಯಾಂಟ್ ಅನ್ನು ಹೊಲಿದಿದ್ದಾರೆ.
ಮೊದಲಿಗೆ ಶಾಹಿಲ್ ಕೈಗಳನ್ನು ಲಾಕ್ ಮಾಡಿ ಪ್ಯಾಂಟ್ ಅನ್ನು ಗೋಣಿಚೀಲ ಹೊಲಿಯುವ ಡಬ್ಬನ್ ನಿಂದ ಹೊಲಿದಿದ್ದಾರೆ. ಸಂತೆಯಲ್ಲಿ ಬಹಳಷ್ಟು ಜನ ಇರುವಾಗಲೇ ಪ್ಯಾಂಟ್ ಹೊಲಿದು ಅವಮಾನ ಮಾಡಲಾಗಿತ್ತು. ಅಲ್ಲದೆ ಅದರ ವೀಡಿಯೋ ಮಾಡಿ, ವೈರಲ್ ಮಾಡಿದ್ದರು. ಇದರಿಂದ ಅವಮಾನಿತನಾದೆ ಎಂದು ಮನನೊಂದ ಶಾಹಿಲ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಜೀವಣ್ಮರಣ ಸ್ಥಿತಿಯಲ್ಲಿ ಶಾಹಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.