ಮಂಗಳೂರು: ಮದರಸ ಮುಗಿಸಿಕೊಂಡು ಏಕಾಏಕಿ ರಸ್ತೆ ದಾಟಲೆತ್ನಿಸಿದ ಬಾಲಕನೋರ್ವ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಗಡಿಭಾಗ ಮಂಜೇಶ್ವರದ ಬಾಳಿವೂರಿನಲ್ಲಿ ಸಂಭವಿಸಿದೆ.
ಮುವಾಜ್(7) ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಬಾಲಕ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ದೃಶ್ಯ ಮಸೀದಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.