ಬುದ್ಧಿವಾದ ಹೇಳಿದಕ್ಕೆ ತಂದೆಯನ್ನೇ ಕೊಂದ ಪಾಪಿ ಮಗ!

ಕುಡಿಯಬೇಡ ಎಂದು ತಂದೆ. ಬುದ್ದಿ ಹೇಳಿದ್ದಕ್ಕೆ ಪಾಪಿ ಪುತ್ರನೊಬ್ಬ ತಂದೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ  ಹುಬ್ಬಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡದಿದೆ. ಮಗನಿಂದ ಕೊಲೆಯಾದ ತಂದಯನ್ನು ನಾಗರಾಜ್‌ ಮೈಸೂರು (77) ಎಂದು. ತಿಳಿದುಬಂದಿದೆ.

ಕೊಲೆ ಮಾಡಿದ ಮಗನನ್ನು ಅಣ್ಣಪ್ಪ ಎಂದು ತಿಳಿದುಬಂದಿದೆ. ಈ ಕುರಿತು ಮೃತನ ಪತ್ನಿ ರೇಣುಕಾ, ಮಗನ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ.19 ರಂದು ತಂದೆ ಮತ್ತು ಮಗನ ನಡುವ ಜಗಳ ವಿಕೋಪಕ್ಕೆ ತಿರುಗಿದೆ.

ಮದ್ಯದ ಅಮಲಿನಲ್ಲಿ ಅಣ್ಣಪ್ಪ ತಂದೆ ನಾಗರಾಜ್‌ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ನಾಗರಾಜ್‌ ಗಂಭೀರವಾಗಿ ಗಾಯಗೊಂಡು ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಾಗರಾಜ್‌ ಮೃತಪಟ್ಟಿದ್ದಾರೆ.

ಆರೋಪಿ ಮಗ ತನ್ನ ಪತ್ನಿಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ. ಅಣ್ಣಪ್ಪನಿಗಾಗಿ ಶೋಧ  ಕೈಗೊಂಡಿದ್ದಾರೆ.

Leave a Reply