ಮಂಗಳೂರು: ಆಟೋ ವರ್ಕ್ ಶಾಪ್‌ನಲ್ಲಿ ಕಳವು ಪ್ರಕರಣ; ಆರೋಪಿಯ ಬಂಧನ

ಮಂಗಳೂರು: ನಗರದ ಮರೋಳಿಯ ಆಟೋ ವರ್ಕ್ ಶಾಪ್‌ನಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನಗರದ ಕಣ್ಣೂರು ನಿವಾಸಿ, ರಿಕ್ಷಾ ಚಾಲಕ ನಝೀರ್ ಮುಹಮ್ಮದ್ (26) ಎಂದು ಗುರುತಿಸಲಾಗಿದೆ.

ಬಂಧಿತನಿಂದ 64,500ರೂ. ನಗದು, ದ್ಚಿಚಕ್ರ ವಾಹನ, ಮೊಬೈಲ್, ಹೆಲ್ಮೆಟ್ ವಶಪಡಿಸಿಕೊಳ್ಳಲಾಗಿದೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply