ಮೂಡಬಿದ್ರೆ:ಗೂಡಂಗಡಿ ಕಳವು-ಮೂವರ ಬಂಧನ

ಮೂಡುಬಿದಿರೆ: ನಗರದ ಹೊರವಲಯದಲ್ಲಿ ಪುತ್ತಿಗೆ ಗ್ರಾಮದ ಮೂಲ್ಕಿ ಕ್ರಾಸ್‌ ಬಳಿ ಜ. 2ರಂದು ರಾತ್ರಿ ಜಯಶ್ರೀ ಸ್ಟೋರ್ಸ್ ಹೆಸರಿನ ಗೂಡಂಗಡಿಯ ಛಾವಣಿ ಶೀಟ್ ಗಳನ್ನು ತೆರೆದು 20,000 ರೂ. ನಗದು, 48,000 ರೂ. ಮೌಲ್ಯದ ಸಿಗರೇಟು, ಪಾನೀಯ, ತಿಂಡಿ ತಿನಿಸು ಮೊದಲಾದ ಸೊತ್ತುಗಳನ್ನು ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆ ತಾಲೂಕು ನಿಡ್ಡೋಡಿ ನೀರುಡೆಯ ರೋಷನ್ ಕ್ವಾಡ್ರಸ್ (37), ಕೊಂಪದವು ನೆಲ್ಲಿತೀರ್ಥದ ನಿಶಾಂಕ್ ಪೂಜಾರಿ (18), 2 5 ಸೆಂಟ್ಸ್‌ನ ರೋಹಿತ್ ಮಸ್ಕರೇನ್ಹಸ್ (21) ಬಂಧಿತರು. ಅವರಿಂದ ಕೃತ್ಯಕ್ಕೆ ಬಳಸಿದ ಕಾರು, ಸ್ಕೂಟರ್ ಮತ್ತು 5,000 ರೂ. ನಗದು ಹಣ ಸಹಿತ ಒಟ್ಟು 3.55 ಲಕ್ಷದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಆರೋಪಿಗಳು ಈ ಹಿಂದೆ ಮುಲ್ಕಿ, ಬಜಪೆ, ಕಾರ್ಕಳ ಮತ್ತು ವೇಣೂರು ಠಾಣೆಗಳ ವ್ಯಾಪ್ತಿಯಲ್ಲಿ ಮೂರು ವರ್ಷಗಳಿಂದ 25ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗೂಡಂಗಡಿಗಳಲ್ಲಿ ಕಳವು ಮಾಡಿರುವ ಪ್ರಕರಣಗಳಲ್ಲಿ ಪಾಲ್ಗೊಂಡವರು.

ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ನಡೆಸಿದ ಕಾರ್ಯಾಚರಣೆಯಲ್ಲಿ‌ ಪಿಎಸ್‌ಐ ನವೀನ್, ಎಎಸ್‌ಐ ರಾಜೇಶ್, ಅಪರಾಧ ವಿಭಾಗದ ಸಿಬಂದಿಗಳಾದ ಮೊಹಮ್ಮದ್ ಇಟ್ಬಾಲ್, ಮೊಹಮ್ಮದ್ ಹುಸೈನ್, ಅಕೀಲ್ ಅಹ್ಮದ್, ನಾಗರಾಜ್, ಪ್ರದೀಪ್, ವೆಂಕಟೇಶ್, ಸತೀಶ್ ಮತ್ತು ರಾಜೇಶ್ ಪಾಲ್ಗೊಂಡಿದ್ದರು.

Leave a Reply