
ಉತ್ತರ ಕಾಂಡದ ರುದ್ರಪುರದಲ್ಲಿ ಜನವರಿ 29 ರಿಂದ ಫೆಬ್ರವರಿ 3ರ ವರೆಗೆ ನಡೆಯಲಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯದ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ತಂಡಗಳು ಭಾಗವಹಿಸುತ್ತದೆ. ಅಲ್ಲದೆ ಉತ್ತರಕಾಂಡದ ರಿಷಿಕೇಶ್ ಶಿವಪುರದಲ್ಲಿ ಫೆಬ್ರವರಿ 3 ರಿಂದ 7ರ ವರೆಗೆ ನಡೆಯಲಿರುವ .ಬೀಚ್ ವಾಲಿಬಾಲ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ .ಪುರುಷರ ಮತ್ತು ಮಹಿಳೆಯರ ಬೀಚ್ ವಾಲಿಬಾಲ್ ತಂಡಗಳು ಭಾಗವಹಿಸುತ್ತದೆ. ಈ ಒಂದು ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯದಿಂದ ಟೆಕ್ನಿಕಲ್ ಕಮಿಟಿ ಸದಸ್ಯರಾಗಿ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಇದರ ಚೇರ್ಮನ್ ಮತ್ತು ಕನ್ವೀನರಾದ ಆಂಥೋನಿ ಜೋಸಫ್ ಅವರನ್ನುl ನೇಮಕ ಮಾಡಿರುತ್ತಾರೆ. ಹಾಗೂ ಕರ್ನಾಟಕ ರಾಜ್ಯದಿಂದ ಬೀಚ್ ವಾಲಿಬಾಲ್ ಟೆಕ್ನಿಕಲ್ ಕಮಿಟಿಯ ಸದಸ್ಯರಾಗಿ ರಾಷ್ಟ್ರೀಯ ತರಬೇತುದಾರ ಪಿವಿ ನಾರಾಯಣ್ ಎನ್ಐಎಸ್ ಇವರು ನೇಮಕಗೊಂಡಿರುತ್ತಾರೆ, ಇವರು ಮೂಲತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಿವಾಸಿಯಾಗಿದ್ದಾರೆ .
ಪುರುಷರ ತಂಡದ ತರಬೇತುದರರಾಗಿ ಧಾರವಾಡದ ಜಿಲ್ಲೆಯ ಪರಶುರಾಮ್ ಬಿ ದಗಿಂದರ್ ಅವರನ್ನು ಆಯ್ಕೆ ಮಾಡಿರುತ್ತಾರೆ. ಮಹಿಳಾ ತಂಡದ ಮ್ಯಾನೇಜರ್ ಆಗಿ ಮಹಮ್ಮದ್ ಷರೀಫ್ ಸಾಲ್ಮರ ನೇಮಕಗೊಂಡಿರುತ್ತಾರೆ. ಪುರುಷರ ಬೀಚ್ ವಾಲಿಬಾಲ್ ತಂಡದ ಕೋಚ್ ಮತ್ತು ಮ್ಯಾನೇಜರ್ ಆಗಿ ರಾಕೇಶ್ . ಹಾಗೂ ಮಹಿಳೆಯರ ಕೋಚ್ ಮತ್ತು ಮ್ಯಾನೇಜರ್ ಆಗಿ ಮಹಮ್ಮದ್ ಇರ್ಷಾದ್ ಕೌಡಿಚಾರ್. ಇವರು ತಂಡದ ಜವಾಬ್ದಾರಿಯನ್ನು ವಹಿಸಿರುತ್ತಾರೆ. ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಸದಸ್ಯರಾದ ಎಂ ಎಂ ಗುಡಿ ಅವರು ಪ್ರಕಟಣೆಯಲ್ಲಿ ತಿಳಿಸುತ್ತಾರೆ.


