
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿ ಬಳಿಯ ರಾಷ್ಟ್ರಿಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಪಾರ್ಕ್ ಮಾಡಲಾಗಿದ್ದ ಕಾರ್ ಒಂದರಲ್ಲಿ 1ಕೋಟಿ ರೂಪಾಯಿ ಪತ್ತೆಯಾಗಿದೆ.



ಮಂಗಳವಾರ ಸಂಜೆಯಿಂದಲೇ ಕಾರನ್ನು ನಿರ್ಜನ ಪ್ರದೇಶದಲ್ಲಿ ಪಾರ್ಕ್ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅಂಕೋಲಾ ಪೊಲೀಸರು ಸ್ಥಳಕೆ ದೌಡಾಯಿಸಿ ಕಾರು ಪರಿಶೀಲಿಸಿದ್ದಾರೆ. ಕಾರ್ ಡೋರ್ ಓಪನ್ ಮಾಡಿ ಪರಿಶೀಲಿಸಿದಾದ ಬರೋಬ್ಬರಿ 1 ಕೋಟಿ ಪತ್ತೆ ಆಗಿದ್ದು, ಪೊಲೀಸರು ಶಾಕ್ ಆಗಿದ್ದಾರೆ. ಅಂಕೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸದ್ಯ ಪೊಲೀಸರು ಕೋಟಿ ಸಿಕ್ಕ ಕಾರನ್ನು ಅಂಕೋಲಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದಾರೆ. ದುಡ್ಡು ಯಾರದ್ದು? ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿದ್ದು ಯಾಕೆ ಎಂದು ತನಿಖೆ ಮುಂದುವರಿದಿದೆ.