
ವಿಟ್ಲ: ಮಸೀದಿಯ ಅಧ್ಯಕ್ಷರು ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪರಿಚಿತರು ಏಕಾ ಏಕಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ವಿಟ್ಲ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಮೊಹಮ್ಮದ್ ಪೊನೆಟ್ಟು ಎಂದು ಗುರುತಿಸಲಾಗಿದೆ.



ಹಲ್ಲೆ ನಡೆಸಿದ ಆರೋಪಿಗಳನ್ನು ಅಬ್ದಾಲ್ ಪೂರ್, ಅಫ್ರಿಸ್, ಶೌಕತ್ ಹಾಗೂ ಶಪೀಕ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶ್ರಫ್ ಮೊಹಮ್ಮದ್ ಪೊನೆಟ್ಟು ಎಂಬವರು ವಿಟ್ಲ ಮಸೀದಿಯ ಕೈತೋಟದಲ್ಲಿ ಸಂಜೆ ಹೊತ್ತಿನಲ್ಲಿ ಗಿಡಗಳಿಗೆ ನೀರು ಹಾಯಿಸುತ್ತಿರುವಾಗ ಆರೋಪಿ ಅಬ್ದಾಲ್ ಪೂರ್ ಎಂಬಾತನು ದ್ವಿಚಕ್ರ ವಾಹನದಲ್ಲಿ ಬಂದು ಏಕಾಏಕಿ ಬಳಿ ಅವಾಚ್ಯ ಶಬ್ದಗಳಿಂದ ಬೈದು ಕೈಲಿದ್ದ ಮರದ ದೊಣ್ಣೆಯಿಂದ ಕೈಗೆ ಹಲ್ಲೆ ಮಾಡಿ ನೆಲಕ್ಕೆ ದೂಡಿ ಹಾಕಿ ಎದೆಗೆ ಕಾಲಿನಿಂದ ಒದ್ದು ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ.
ಹಲ್ಲೆಯಿಂದ ಕೈ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯವಾಗಿದೆ. ನಂತರ ಆರೋಪಿಗಳಾದ ಅಫ್ರಿಸ್ ಶೌಕತ್ ಅಲಿ, ಶಪೀಕ್ ಎಂಬಾತರು ಮೊಬೈಲ್ ಕಾಲ್ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿರುತ್ತಾರೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023 ( U/s- 118(1), 352,352(2)351(3)3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಶ್ರಫ್ ಮೊಹಮ್ಮದ್ ಪೊನೆಟ್ಟು ಸಾಮಾಜಿಕವಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರು.
ಶಾಂತ ಸ್ವಭಾವದವರಾಗಿದ್ದು, ಸಾಮರಸ್ಯ ಭಾವನೆಯುಳ್ಳವರಾಗಿದ್ದಾರೆ. ಮಾನವೀಯ ಗುಣವುಳ್ಳವರಾಗಿದ್ದು, ಸಮಾಜದಲ್ಲಿ ಎಲ್ಲರನ್ನೂ ಏಕ ಭಾವನೆಯಿಂದ ಕಾಣುವ ಇವರು ಸಮಾಜದ ಎಲ್ಲರ ಪ್ರೀತಿಗೆ ಪಾತ್ರರಾದವರು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.