May 18, 2026
WhatsApp Image 2026-04-15 at 4.17.12 PM

ಬೆಂಗಳೂರು : ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ, ನಸೀರ್ ಅಹಮದ್ ತಲೆದಂಡಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿರಲಿಲ್ಲ. ನಾನು ಪಾರ್ಟಿ ಕೆಲಸಕ್ಕೆ ಹೋಗಿದ್ದೆ ಒಂದು ಹೇಳಿಕೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹೈಕಮಾಂಡ್ ಕೆಲಸ ಮಾಡಲು ತಾನೇ ನಾನು ಕೇರಳಕ್ಕೆ ಹೋಗಿದ್ದು ಮೋಜು ಮಾಸ್ತಿ ಮಾಡಲು ಕಳ್ಳಾಟ ಆಡಲು ಹೋಗಿದ್ದಿನ? ಇಲ್ಲ ತಾನೇ? ಮೊಬೈಲ್ ಸ್ವಿಚ್ ಆಫ್ ಮಾಡಿ ಹಾಲಿಡೇಸ್ ಹೋಗಿದ್ದರೆ ಅದು ತಪ್ಪು. ಹಗಲು ರಾತ್ರಿ ನಾನು ಕೆಲಸ ಮಾಡಿದ್ದೇನೆ ದಿನಕ್ಕೆ 350 ಕಿಲೋ ಮೀಟರ್ ಪ್ರಯಾಣ ಮಾಡಿ ಪ್ರಚಾರ ಮಾಡಿದ್ದೇನೆ ಈಗ ನನ್ನ ಮೇಲೆ ಒಂದಷ್ಟು ಆರೋಪ ಮಾಡುತ್ತಿದ್ದಾರೆ ಯಾಕೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸಚಿವರ ಜೊತೆ ಸಭೆಯ ಬಳಿಕ ಅಸಮಾಧಾನ ಹೊರಹಾಕಿದ್ದಾರೆ.

ಮುಂದಿನ ಟಾರ್ಗೆಟ್ ನಾನೇ ಎಂದು ಹೇಳುತ್ತಿದ್ದಾರೆ ಮಾಧ್ಯಮಗಳಲ್ಲಿ ಈ ರೀತಿಯ ಚರ್ಚೆ ನಡೆಯುತ್ತಿದೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಜೊತೆಗೆ ಚರ್ಚಿಸಿದ್ದೇನೆ ನಾಳೆ ಆದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸಹ ಭೇಟಿ ಮಾಡುತ್ತೇನೆ. ಬೇರೆ ಯಾರ ಮಾತಿಗೂ ಅರ್ಥ ಇಲ್ಲ. ಟಾರ್ಗೆಟ್ ಯಾರು ಮಾಡಬೇಕು? ಮಾಡಿದ್ರೆ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಮಾಡಬೇಕು.

ನಸಿರ್ ಅಹಮದ್ ಪಕ್ಷದಲ್ಲಿ ತುಂಬಾ ಹಿರಿಯರು ಅವರನ್ನು ವಜಾ ಮಾಡಿದ್ದು ನನಗೂ ಬೇಸರವಿದೆ. ಜೊತೆಗೆ ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದೇನೆ. ನಾನು ಬಹಳ ಸಣ್ಣವನು ಪಕ್ಷದ ಸೇವಕ ಅಷ್ಟೇ. ಯಾವತ್ತು ನಾನು ಜಾತಿ ರಾಜಕಾರಣ ಮಾಡಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

About The Author

Leave a Reply