

ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್ ಇದೀಗ ತೀರ್ಪು ಪ್ರಕಟಿಸಿದ್ದು, ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿನ್ನೆಲೆ ವಿನಯ್ ಕುಲಕರ್ಣಿ ಇದೀಗ ಮತ್ತೆ ಜೈಲು ಸೇರಿದ್ದಾರೆ.
ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಇದೀಗ ಮತ್ತೆ ಜೈಲು ಸೇರಿದ್ದು, ವಿನಯ್ ಕುಲಕರ್ಣಿ ಅಪರಾಧಿ ಎಂದು ಕೋರ್ಟು ತೀರ್ಪು ಪ್ರಕಟಿಸಿದೆ. ಕೊಲೆ ಪ್ರಕರಣದ ಅಪರಾಧಿಗಳು ಎಂದು ತೀರ್ಪು ಪ್ರಕಟಿಸಿದ್ದು, ಪ್ರಕರಣದಲ್ಲಿ ಅಪರಾಧಿಗಳು ಎಂದು ಕೋರ್ಟು ತೀರ್ಪು ನೀಡಿದೆ. ನಾಳೆ ಶಿಕ್ಷಪ್ರಮಾಣದ ಬಗ್ಗೆ ವಾದಮಂಡನೆ ನಡೆಯಲಿದೆ. ಈ ವೇಳೆ ಅಪರಾಧಿಗಳನ್ನು ಕಸ್ಟಡಿಗೆ ಪಡೆಯಿರಿ ಎಂದು ಸೂಚನೆ ನೀಡಿತು. ಇನ್ನು ಪ್ರಕರಣದ A20 ವಾಸುದೇವ್ ನೀಲೇಕೆಣೆ, ಹಾಗೂ A21 ಸೋಮಶೇಖರ್ ನ್ಯಾಮಗೌಡ ಇಬ್ಬರನ್ನು ಬಿಡುಗಡೆಗೆ ಮಾಡುವಂತೆ ಕೋರ್ಟ್ ಆದೇಶ ಹೊರಡಿಸಿತು. ಇವರಿಬ್ಬರನ್ನು ಹೊರತುಪಡಿಸಿ 19 ಜನ ಅಪರಾಧಿಗಳು ಎಂದು ಕೋರ್ಟ್ ತೀರ್ಪು ಪ್ರಕಟಿಸಿದೆ.

ಪ್ರಕರಣ ಹಿನ್ನೆಲೆ
ಜೂನ್ 15 2016 ರಂದು ಯೋಗೇಶ್ ಗೌಡ ಕೊಲೆ ನಡೆಯಿತು. ಉದಯ ಜಿಮ್ ನಲ್ಲಿ ಯೋಗೀಶ್ ಗೌಡ ಕೊಲೆ ಆಯಿತು. ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿ ಈ ಒಂದು ಕೊಲೆ ನಡೆದಿತ್ತು. ಆರಂಭದಲ್ಲಿ ಧಾರವಾಡ ಉಪನಗರ ಠಾಣೆ ಪೋಲೀಸರು ತನಿಖೆ ನಡೆಸಿದರು. ಈ ವೇಳೆ ಯೋಗೇಶ್ ಕುಟುಂಬ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದರು. ಮೊದಲು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 6 ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಒಂದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.
ಕೊಲೆ ಮಾಡಿದ್ದು 7 ಆರೋಪಿಗಳು ಅಂತ ಸಿಬಿಐ ತನಿಖೆಯಲ್ಲಿ ಬಹಿರಂಗವಾಯಿತು. ಪ್ರಕರಣದಲ್ಲಿ ಸಿಬಿಐನಿಂದ 750ಕ್ಕೂ ಹೆಚ್ಚು ಜನರ ವಿಚಾರಣೆ ನಡೆದಿದೆ. ಬಳಿಕ ನವೆಂಬರ್ 5 2020 ರಂದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಬಂಧನವಾಯಿತು. 9 ತಿಂಗಳು ಬೆಳಗಾವಿಯ ಹಿಂಡಲಗಾ ಜಿಲ್ಲೆನಲ್ಲಿ ವಿನಯ್ ಕುಲಕರ್ಣಿ ಇದ್ದರು. ಆಗಸ್ಟ್ 1321 ರಂದು ಸುಪ್ರೀಂ ಕೋರ್ಟ್ ಇಂದ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕಿತು. ಧಾರವಾಡ ಜಿಲ್ಲೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿತ್ತು. ಜಾಮೀನು ಸಿಕ್ಕರು ವಿನಯ್ ಕುಲಕರ್ಣಿಗೆ ಧಾರವಾಡಕ್ಕೆ ಎಂಟ್ರಿ ಇರಲಿಲ್ಲ.
ಈ ವೇಳೆ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿಯಿಂದ ಸ್ಪೋಟಕವಾದ ಹೇಳಿಕೆ ಬಂದಿತ್ತು. ತನ್ನನ್ನೇ ಕೊಲೆ ಮಾಡಲು ವಿನಯ್ ಕುಲಕರ್ಣಿ ಸಂಚು ರೂಪಿಸಿದ್ದರು ಎಂದು ಗಂಭೀರವಾದ ಆರೋಪ ಮಾಡಿದ್ದ. ಎರಡು ಬಾರಿ ತನ್ನನ್ನು ಕೊಲ್ಲಲು ವಿನಯ್ ಕುಲಕರ್ಣಿ ಪ್ಲಾನ್ ಹಾಕಿದ್ದರು ಎಂದು ಆರೋಪಿಸಿದ್ದ. ಇದರಿಂದಾಗಿ ಮಾಫೀಸಾಕ್ಷಿ ಯನ್ನಾಗಿ ಮಾಡಲು ಬಸವರಾಜ್ ಮುತ್ತಗಿ ಸಿದ್ದನಾಗಿದ್ದ. ಮೊದಲನೇ ಆರೋಪಿಯೇ ಮಾಫಿ ಸಾಕ್ಷಿಯಾಗಲು ಸಿದ್ಧನಾಗಿದ್ದ ಮುತ್ತಗಿ ಸಾಕ್ಷಿ ಇಂದಾಗಿ ವಿನಯ್ ಕುಲಕರಣಿಗೆ ಕಂಟಕ ಹೆಚ್ಚಾಗಿತ್ತು.
ಈ ಹಿನ್ನಲೆ ವಿನಯ್ ಕುಲಕರ್ಣಿ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದರು. ಬಸವರಾಜ ಮುತ್ತಗಿ ಮಾಫಿ ಸಾಕ್ಷಿಗೆ ಸುಪ್ರೀಂ ಕೋರ್ಟ್ ಇದೆ ಸಂದರ್ಭದಲ್ಲಿ ಒಪ್ಪಿಗೆ ಸಹ ನೀಡಿತು. ಸುಮಾರು 10, 000 ಪುಟಗಳ ಚಾರ್ಜ್ ಶೀಟನ್ನು ಸಿಬಿಐ ಸಲ್ಲಿಸಿತ್ತು. ಇದಾದ ಬಳಿಕ ಮತ್ತೆ ವಿನಯ್ ಕುಲಕರ್ಣಿ ಸಂಕಷ್ಟಕ್ಕೆ ಸಿಲುಕಿದ್ದರು. ಸಾಕ್ಷಿಗಳಿಗೆ ಆಮಿಷ ಒಡ್ಡಿದ ಆರೋಪವನ್ನು ಸಿಬಿಐ ಹೊರಸಿತ್ತು. ದಾಖಲೆಗಳೊಂದಿಗೆ ಸಿ ಬಿ ಐ ಕೋರ್ಟ್ ಮೊರೆ ಹೋಗಿತ್ತು ಸಿಬಿಐ ಮನವಿಯನ್ನು ಸುಪ್ರೀಂಕೋರ್ಟ್ ಇದೆ ಸಂದರ್ಭದಲ್ಲಿ ಪುರಸ್ಕರಿಸಿತ್ತು.
ಜೂನ್ 6 2025ರಂದು ಇಬ್ಬರ ಜಾಮೀನು ರದ್ದುಗೊಳಿಸಿ, ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು. ಒಂದು ವಾರದ ಒಳಗಾಗಿ ಪೊಲೀಸರಿಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತು. ಆದೇಶದ ಪ್ರಕಾರ ಮತ್ತೆ ವಿನಯ್ ಕುಲಕರ್ಣಿ 8 ತಿಂಗಳು ಜೈಲು ಸೇರಿದ್ದರು. ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿದ ಬಳಿಕ ಮತ್ತೆ ಜಾಮೀನು ಸಿಕ್ಕಿತ್ತು. ಇದೀಗ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಒಂದು ತೀರ್ಪು ಪ್ರಕಟಿಸಿದೆ.
21 ಆರೋಪಿಗಳು ಯಾರ್ಯಾರು?
A2 ವಿಕ್ರಂ ಬಳ್ಳಾರಿ, A3 ಕೀರ್ತಿ ಕುಮಾರ್ ಬೆಳ್ಳಟ್ಟಿ, A4 ಸಂದೀಪ್ ಸವದತ್ತಿ, A5 ವಿನಾಯಕ್ ಕಟಗಿ, A6 ಮಹಾಬಲೇಶ್ವರ ಹೊಂಗಲ, A7 ಸಂತೋಷ ಸವದತ್ತಿ, A8 ದಿನೇಶ್, A9 ಅಶ್ವಥ್ A10 ಸುನಿಲ್, A11 ನಜೀರ್ ಅಹಮದ್, A12 ಶಾನವಾಜ್, A13, ನೂತನ್ A14 ಹರ್ಷಿತ್ ಸಿ A15 ವಿನಯ್ ಕುಲಕರ್ಣಿ, A16 ಚಂದ್ರಶೇಖರ್ ಇಂಡಿ, A18 ವಿಕಾಸ್ ಕಲ್ಬುರ್ಗಿ, A19 ಚನ್ನಕೇಶವ ಟಿಂಗರೀಕರ, A20 ವಾಸುದೇವ ನೀಲಿಕೆನಿ, A21 ಸೋಮಶೇಖರ್ ನ್ಯಾಮಗೌಡ.ಈ ಒಂದು ಪ್ರಕರಣದಲ್ಲಿ 21 ಆರೋಪಿಗಳ ಪೈಕಿ A1 ಹಾಗು A17 ಮಾಫಿ ಸಾಕ್ಷಿಯಾಗಿದ್ದಾರೆ.






