April 25, 2026
WhatsApp Image 2026-04-25 at 12.48.49 PM

ಕಡೂರು: ತಾಲೂಕಿನ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿ. ಮಾದಾಪುರ ಗ್ರಾಮದ ಸುಮಾರು 45 ವರ್ಷದ ನಿರಂಜನ್ ಎಂಬ ವ್ಯಕ್ತಿ ಕಳೆದ 15 ದಿನಗಳ ಹಿಂದೆ ನಾಪತ್ತೆಯಾಗಿದ್ದರು.

ಈ ಕುರಿತು ಅವರ ಪೋಷಕರು ದಿ. 23-04-2026 ರಂದು ಯಗಟಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಕೇವಲ 24 ಗಂಟೆಯೊಳಗೆ, ಅಂದರೆ ದಿ. 24-04-2026ರಂದು ನಾಪತ್ತೆಯಾಗಿದ್ದ ನಿರಂಜನ್ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪತ್ತೆಯಾದ ವ್ಯಕ್ತಿಯನ್ನು ಸುರಕ್ಷಿತವಾಗಿ ದೂರುದಾರರ ವಶಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ಠಾಣಾಧಿಕಾರಿ ಶ್ರೀ ಷಾಯಿದ್ ಅಪ್ರಿದಿ ಹಾಗೂ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ

About The Author

Leave a Reply