May 10, 2026
WhatsApp Image 2026-05-10 at 9.10.39 AM

ಕಣ್ಣೂರು: ಮಾನಾಲ ನಿವಾಸಿ, ಸಮಾಜ ಸೇವಕ ಹಾಗೂ ವೃತ್ತಿಯಿಂದ ರಿಕ್ಷಾ ಚಾಲಕರಾಗಿದ್ದ ಸೂರಜ್ (54) ಅವರು ಶುಕ್ರವಾರ ದಿನಾಂಕ 08/05/2026 ರಂದು ಒಲೆಯನ್ಶಿಯಾ ಸರ್ಕಲ್ ಬಳಿಯ ಜ್ಯೂಸ್ ಅಂಗಡಿಯಲ್ಲಿ ಹಠಾತ್ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಸೂರಜ್ ಅವರು ಬಡವರ ಕಲ್ಯಾಣ, ಶೈಕ್ಷಣಿಕ ನೆರವು ಸೇರಿದಂತೆ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಸಭಾಧ್ಯಕ್ಷ ಯು.ಟಿ. ಖಾದರ್ ಭೇಟಿ, ಸಾಂತ್ವನ
ಸೂರಜ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಕರ್ನಾಟಕ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂತಾಪ ಸೂಚಿಸಿದ ಅವರು, “ಸೂರಜ್ ಅವರು ನಮ್ಮ ನಡುವಿನ ಆತ್ಮೀಯರು. ಸಮಾಜ ಸೇವೆಯಲ್ಲಿ ಸದಾ ಸಕ್ರಿಯರಾಗಿದ್ದರು. ಅವರ ಹಠಾತ್ ಅಗಲಿಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ” ಎಂದು ಹೇಳಿದರು.

About The Author

Leave a Reply